ಸೋಮವಾರಪೇಟೆ, ಅ. 19: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಎಸ್‍ಜೆಎಂ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಿಸಲಾಯಿತು.

ಶಾಲಾ ಆವರಣದಲ್ಲಿ 21 ವಿದ್ಯಾರ್ಥಿಗಳಿಗೆ ಸದಸ್ಯ ಪಿ.ಕೆ. ಚಂದ್ರು ಸೈಕಲ್ ವಿತರಿಸಿದರು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ರುದ್ರೇಶ್, ಸಹ ಶಿಕ್ಷಕ ಪರಮೇಶ್ವರಪ್ಪ, ರಾಣಿ ರವೀಂದ್ರ, ಕೆ.ಇ. ಬೆನ್ನೂರ, ಎಸ್.ಎಸ್. ವಿರೂಪಾಕ್ಷಯ್ಯ, ಸಿಬ್ಬಂದಿ ತೇಜಸ್ವಿನಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವಣ್ಣ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.