ಮಡಿಕೇರಿ, ಅ. 20: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಬಳ್ಳಾರಿ ನಗರದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಯುವ ವಿಜ್ಞಾನಿ ಸಮಾವೇಶದಲ್ಲಿ ಕೊಡಗಿನ ಬಿ.ಡಿ. ಅಭಿಜ್ಞಾನ್‍ಗೆ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಬಿ.ಡಿ. ಅಭಿಜ್ಞಾನ್, ಶಿಕ್ಷಕಿ ಬಿ.ವೀಣಾ ಮಾರ್ಗದರ್ಶನದಲ್ಲಿ ‘ಗುರುತ್ವಾಕರ್ಷಣೆ ಬಲದಿಂದ ವಿದ್ಯುತ್ ಉತ್ಪಾದನೆ’ ಎಂಬ ವಿಷಯದ ಕುರಿತು ಸಂಶೋಧನಾತ್ಮಕವಾಗಿ ತಯಾರಿಸಿದ ವೈಜ್ಞಾನಿಕ ಪ್ರಬಂಧವನ್ನು ಉತ್ತಮವಾಗಿ ಮಂಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯುವ ವಿಜ್ಞಾನಿ ಬಿ.ಸಿ. ಅಭಿಜ್ಞಾನ್‍ಗೆ ರೂ. 10 ಸಾವಿರ ನಗದು ಬಹುಮಾನ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿ ಅಭಿಜ್ಞಾನ್, ಸಿವಿಲ್ ಗುತ್ತಿಗೆದಾರ ಬಲ್ಲಡ್ಕ ಆರ್. ಚಂದನ್ ಮತ್ತು ಉಪನ್ಯಾಸಕಿ ಕೆ.ಸಿ. ಹೇವi ದಂಪತಿಯ ಪುತ್ರ.