ಮರಗೋಡು, ಅ. 20: ಮರಗೋಡು ಹೋಬಳಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿದ ನೆರೆ ಸಂತ್ರಸ್ತರಿಗೆ 20 ಮನೆಯವರಿಗೆ ಪರಿಹಾರ ಹಣದ ಚೆಕ್‍ನ್ನು ವಿತರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿ.ಬಿ. ಬಾಲಕೃಷ್ಣ, ಸಮಾಜದ ಕಷ್ಟ ಸುಖಕ್ಕೆ ಸಂಘ ಸದಾ ಸಿದ್ಧವಿರುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಬಿ.ಡಿ. ಲಲಿತ, ಖಜಾಂಚಿ ಬಿ.ಎಸ್. ಲತಾ ಮತ್ತು ಸದಸ್ಯರು ಹಾಜರಿದ್ದರು.