ವೀರಾಜಪೇಟೆ, ಅ. 19: ವೀರಾಜಪೇಟೆ ಗಡಿಯಾರ ಕಂಬದ ಬಳಿಯಿರುವ ಪ್ರತಿಷ್ಠಿತ ಗಣಪತಿ ದೇವಾಲಯದ ವತಿಯಿಂದ ತಾ. 27 ರಿಂದ 29 ರತನಕ ದೀಪಾವಳಿ ಉತ್ಸವವನ್ನು ಆಚರಿಸಲಾಗುವದು ಎಂದು ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್. ಜಗದೀಶ್ ತಿಳಿಸಿದ್ದಾರೆ.
ವೀರಾಜಪೇಟೆ ಪ್ರೆಸ್ ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಗದೀಶ್ ಅವರು, ದೀಪಾವಳಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆಯಲಿದ್ದು, ಮೂರು ದಿನಗಳು ರಾತ್ರಿ 7 ಗಂಟೆಗೆ ಹೂ ಬಾಣ ಪಟಾಕಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ದೀಪಾವಳಿ ಉತ್ಸವದ ಅಂಗವಾಗಿ ಪ್ರತಿಭಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ರಂಗೋಲಿ ಸ್ಪರ್ಧೆ, ಭಕ್ತಿಗೀತೆ ಸಂಗೀತ ಸ್ಪರ್ಧೆಯನ್ನು ಕಿರಿಯರ, ಹಿರಿಯರ ವಿಭಾಗಕ್ಕೆ ಆಯೋಜಿಸಲಾಗಿದೆ. ಸ್ಪರ್ಧೆಗಳು ತಾ. 27 ರಂದು ದೇವಸ್ಥಾನದ ರಂಗಮಂಟಪದಲ್ಲಿ ನಡೆಯಲಿದೆ. ಸ್ಪರ್ಧಾಳುಗಳು ಅರ್ಜಿ ಸಲ್ಲಿಸಲು ತಾ. 24 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 9448055844, 9448813737 ಸಂಪರ್ಕಿಸಬಹುದು.