ಮಡಿಕೇರಿ, ಅ. 20: ಕೊಡಗಿನ ಕುಲ ದೇವತೆ ಕಾವೇರಿ ತೀರ್ಥ ಉದ್ಭವವಾಗುವ ಸಂದರ್ಭ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ರೋವರ್ಸ್‍ಗಳು ನೂಕು ನುಗ್ಗಲು ಆಗದಂತೆ ತೀರ್ಥ ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ. ಅನೇಕ ವರ್ಷದಿಂದ ಈ ಕಾರ್ಯ ಮಾಡುತ್ತಿರುವ ರೋವರ್ಸ್‍ಗಳಿಗೆ ಮಂದೆಯಂಡ ವನಿತ್ ಕುಮಾರ್ ನಾಯಕರಾದರೆ ಸ್ಕೌಟ್ಸ್ ಗೈಡ್ಸ್‍ನ ಪ್ರಧಾನ ಆಯುಕ್ತ ಕಂಬೀರಂಡ ಕಿಟ್ಟು ಕಾಳಪ್ಪ, ಜಿಲ್ಲಾ ಎಸ್‍ಪಿ ಸುಮಾನ್ ಡಿ.ಪಿ. ಮತ್ತು ಜಿಲ್ಲಾ ಸಂಘಟಕಿ ದಮಯಂತಿ ಮಾರ್ಗದರ್ಶನದಲ್ಲಿ ಸೇವೆ ನಡೆಯುತ್ತದೆ. ಈ ಭಾರಿ ಸುಮಾರು 20 ರೋವರ್ಸ್‍ಗಳು ಈ ಸೇವೆಯಲ್ಲಿ ಭಾಗವಹಿಸಿದ್ದಾರೆ.

ವರದಿ: ಹರ್ಷಿತ್ ಪೂವಯ್ಯ ಮತ್ರಂಡ