ಸೋಮವಾರಪೇಟೆ, ಅ. 20: ಶೈಕ್ಷಣಿಕ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ಕುರಿತ ಇತಿಹಾಸವನ್ನು ಕೈಬಿಡಲು ಕ್ರಮ ವಹಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.ಈ ಬಗ್ಗೆ ಪತ್ರ ಬರೆದಿರುವ ಶಾಸಕರು, ಟಿಪ್ಪುವಿನ ಚರಿತ್ರೆಯನ್ನು ಸರಿಯಾಗಿ ಅರಿಯದೇ ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಲಾಗಿದೆ. ಟಿಪ್ಪುವನ್ನು ಸುಖಾಸುಮ್ಮನೆ ವೈಭವೀಕರಿಸಲಾಗಿದ್ದು, ಆತ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಹೋರಾ ಡಿದ್ದನೇ ಹೊರತು, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಈ ಹಿನ್ನೆಲೆ ಆತನ ಬಗ್ಗೆ ಅಳವಡಿಕೆ ಯಾಗಿರುವ ವಿಷಯಗಳನ್ನು ಪಾಠದಿಂದ ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.ಭಾರತದ ಮೇಲೆ ಧಾಳಿ ನಡೆಸಿದ ಫ್ರೆಂಚರೊಂದಿಗೆ ಕೈಜೋಡಿಸಿದ್ದ ಟಿಪ್ಪು, ಅಸಂಖ್ಯಾತ ಹಿಂದೂಗಳನ್ನು ಮತಾಂತರ (ಮೊದಲ ಪುಟದಿಂದ) ಮಾಡಿದ್ದಾನೆ. ಬಲವಂತದ ಮತಾಂತರಕ್ಕೆ ಒಪ್ಪದವರನ್ನು ಹತ್ಯೆ ಮಾಡಿದ್ದಾನೆ. ಈತನಿಂದ ಕೊಡಗಿನಲ್ಲೂ ನರಮೇಧ ನಡೆದಿದ್ದು, ಮಂಗಳೂರಿನಲ್ಲೂ ಕ್ರಿಶ್ಚಿಯನ್ನರ ಮೇಲೆ ಆಕ್ರಮಣ ನಡೆಸಲಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ. ಕನ್ನಡದ ಬದಲಿಗೆ ಪರ್ಷಿಯನ್ ಭಾಷೆಯನ್ನು ಆಡಳಿತದಲ್ಲಿ ಅಳವಡಿಸಿದ್ದ ಟಿಪ್ಪು, ಕನ್ನಡ ವಿರೋಧಿಯೂ ಆಗಿದ್ದ ಎಂಬದನ್ನು ಸೂಚಿಸುತ್ತದೆ. ಈಗಿನ ಶಿಕ್ಷಣ ಪದ್ದತಿ ಬಗ್ಗೆ ನುರಿತ ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿ, ದೇಶಭಕ್ತಿ ಮೂಡಿಸುವ ಶಿಕ್ಷಣವನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಪಠ್ಯದಲ್ಲಿ ಅಳವಡಿಸಬೇಕು. ಟಿಪ್ಪುವಿನ ಬಗ್ಗೆ ಸೃಷ್ಟಿಸಿರುವ ತಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆದುಹಾಕಬೇಕು ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.