ಕುಶಾಲನಗರ, ಅ. 20: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಯಾದ ಹಿನ್ನೆಲೆ ಸಂಬಂಧಪಟ್ಟ ಕಚೇರಿಗಳು ಹಾಗೂ ಸಾಧಕ ಬಾಧÀಕಗಳ ಕುರಿತು ಚರ್ಚಿಸಲು ತಾ. 21ರಂದು (ಇಂದು) ಮಧ್ಯಾಹ್ನ 2 ಗಂಟೆಗೆ ಕುಶಾಲನಗರ ಕನ್ನಿಕಾ ಸಭಾಂಗಣದಲ್ಲಿ ಕ್ಷೇತ್ರದ ಶಾಸಕರ ಅಧÀ್ಯಕ್ಷತೆಯಲ್ಲಿ ಡಿಸಿ, ಎಸಿ, ತಹಶೀಲ್ದಾರ್ ಹಾಗೂ ಹಲವು ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ.