ಮಡಿಕೇರಿ, ಅ. 20: ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಭಾರತದ ಯುವಪೀಳಿಗೆ ಉದ್ಯೋಗದಲ್ಲಿಯೂ ಮಾನಸಿಕ ಒತ್ತಡದಿಂದ ನಲುಗುವಂತಾಗಿದೆ ಎಂದು ಬೆಂಗಳೂರಿನ ಮನೋವೈದ್ಯ ಡಾ. ಅಜಿತ್ ವಿ. ಬಿಡೆ ಅಭಿಪ್ರಾಯಪಟ್ಟಿದ್ದಾರೆ.
‘ಯುವಪೀಳಿಗೆಯಲ್ಲಿ ಉದ್ಯೋಗದ ಒತ್ತಡದ ಪರಿಣಾಮಗಳು’ ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡಿದ ಡಾ. ಅಜಿತ್ ಬಿಡೆ, ತಮ್ಮ ಆರೋಗ್ಯಕ್ಕೆ ಹೆಚ್ಚಿನ ಹಣ ವಿನಿಯೋಗಿಸಲು ಹಿಂಜರಿಯುತ್ತಾರೆ. ಬಹುತೇಕ ಮಂದಿ ಆರೋಗ್ಯ ವಿಮೆ ಕೂಡ ಹೊಂದಿರುವದಿಲ್ಲ. ಹೀಗಾಗಿಯೇ ಆರೋಗ್ಯ ಕೆಟ್ಟಾಗ ಆರ್ಥಿಕತೆಯ ಸಮಸ್ಯೆಯಿಂದ ಬಳಲುತ್ತಾರೆ. ಆರೋಗ್ಯ ಚಿಕಿತ್ಸೆ ಭಾರತೀಯರ ಖರ್ಚು ವೆಚ್ಚಗಳ ಪೈಕಿ ಆದ್ಯತೆಯೇ ಅಲ್ಲದಿರುವದೂ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಒತ್ತಡ ಮುಕ್ತ ಜೀವನ ಕ್ರಮದಿಂದಾಗಿ ಸಂತೋಷದಾಯಕ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ ಎಂದೂ ಡಾ. ಅಜಿತ್ ಬಿಡೆ ಅಭಿಪ್ರಾಯಪಟ್ಟರು. ಮಕ್ಕಳ ಪಾಲಿಗೆ ಪೆÇೀಷಕರೇ ತಮ್ಮ ಜೀವನ ಶೈಲಿಯ ಮೂಲಕ ಮೊದಲ ಆದರ್ಶವಾಗಬೇಕೆಂದು ಕಿವಿಮಾತು ಹೇಳಿದ ಡಾ. ಶೋಭಾ ಶ್ರೀನಾಥ್, ಮಕ್ಕಳನ್ನು ದೂರುವದೇ ಪೆÇೀಷಕರ ಕರ್ತವ್ಯ ಎಂದು ಅನೇಕರು ಭಾವಿಸಿರುವಂತಿದೆ. ಮಕ್ಕಳು ತಮ್ಮ ಫೆÇೀಷಕರೊಂದಿಗೆ ಮುಕ್ತವಾಗಿ ಮಾತನಾಡುತ್ತಾ ಬೆರೆಯುವ ಸ್ಥಳಗಳಲ್ಲಿ ಮೊಬೈಲ್ ಸದ್ದು ಮಾತನಾಡುವಂತಾಗಿದೆ ಎಂದು ವಿಷಾಧಿಸಿದರು.