ಶನಿವಾರಸಂತೆ, ಅ. 19: ಸಮೀಪದ ಸುಳುಗಳಲೆ ಕಾಲೋನಿಯ ಅಂಗಡಿಯೊಂದಕ್ಕೆ ಹಿಂಭಾಗದಿಂದ ನುಗ್ಗಿ ಅಲ್ಲಿದ್ದ ಸಾಮಗ್ರಿಗಳೊಂದಿಗೆ ಡ್ರಾಯರ್‍ನಲ್ಲಿದ್ದ ರೂ. 300ನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೋನಿಯ ಜೀವನ್ ಬಂಧಿತ ಆರೋಪಿ. ವ್ಯಾಪಾರಿ ಎಸ್.ಎಸ್. ಚಂದ್ರ ರಾತ್ರಿ ಅಂಗಡಿಯಲ್ಲಿ ವ್ಯಾಪಾರ ಮುಗಿಸಿ ಹಣವನ್ನು ಡ್ರಾಯರ್‍ನಲ್ಲಿರಿಸಿ ಬಾಗಿಲಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಅಂಗಡಿಗೆ ಬಂದು ಬೀಗ ತೆಗೆದಾಗ ಕಳವು ಮಾಡಿರುವದು ಗಮನಕ್ಕೆ ಬಂದಿದೆ. ಅಂಗಡಿಯಲ್ಲಿದ್ದ ಸಿಗರೇಟ್ ಪ್ಯಾಕ್‍ಗಳು, ಸೋಪುಗಳು, ಚಾಕಲೇಟ್, ತಿಂಡಿ ಇತರ ಪದಾರ್ಥಗಳೊಂದಿಗೆ ಹಣವನ್ನು ಕಳವು ಮಾಡಲಾಗಿತ್ತು.
ಶನಿವಾರಸಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.