ನಾಪೋಕ್ಲು, ಅ. 19: ನೆರೆ ಹಾವಳಿಯಿಂದ ಮುಳುಗಡೆಯಾಗಿದ್ದ ಕೊಟ್ಟಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಣ್ಣಬಣ್ಣ ಹಾಗೂ ಸ್ವಚ್ಛತೆಗೆ ಹೊದ್ದೂರು ಗ್ರಾಮ ಪಂಚಾಯಿತಿ ವತಿಯಿಂದ ರೂ. 10000 ಅನುದಾನ ನೀಡಲಾಯಿತು. ಪಂಚಾಯಿತಿ ಸದಸ್ಯ ಪಿ.ಎ. ಶಾಫಿ. ಎಸ್ಡಿಎಂಸಿ ಅಧ್ಯಕ್ಷೆ ಫೌಸಿಯ, ಮುಖ್ಯೋಪಾ ಧ್ಯಾಯಿನಿ ಸಾವಿತ್ರಿ, ಪಿಡಿಓ ಅಬ್ದುಲ್ಲಾ, ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.