ಮೂರ್ನಾಡು: ಇಲ್ಲಿನ ಗಜಾನನ ಯುವಕ ಸಂಘವು ವರ್ಷಂಪ್ರತಿ ನಡೆಸಿಕೊಂಡು ಬರುವಂತೆ ತೀರ್ಥೋದ್ಭವದ ವೇಳೆಯಲ್ಲಿ ತಲಕಾವೇರಿಗೆ ತೆರಳಿ ಕಾವೇರಿ ತೀರ್ಥವನ್ನು ತರುವದರ ಮೂಲಕ ಮೂರ್ನಾಡಿನ ಮುಖ್ಯ ರಸ್ತೆಗಳಲ್ಲಿ ವಾಹನದಲ್ಲಿ ಸಾಗಿ ಭಕ್ತಾದಿಗಳಿಗೆ ಕಾವೇರಿ ತೀರ್ಥವನ್ನು ಹಂಚಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಚೆಟ್ಟಿಮಾಡ ಜಯಂತ್ ಮತ್ತು ಸದಸ್ಯರು ಪಾಲ್ಗೊಂಡು ತೀರ್ಥ ವಿತರಿಸಿದರು.ಕುಶಾಲನಗರ: ಕುಶಾಲನಗರದ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ 7ನೇ ವರ್ಷದ ಕಾವೇರಿ ತೀರ್ಥ ವಿತರಣೆ ಕಾರ್ಯಕ್ರಮ ನಡೆಯಿತು.

ಕೊಡಗು-ಮೈಸೂರು ಜಿಲ್ಲೆಯ ಗಡಿಭಾಗದ ಕುಶಾಲನಗರ ಕೊಪ್ಪ ಗೇಟ್ ಬಳಿಯಿರುವ ಶ್ರೀ ಕಾವೇರಿ ಮಾತೆಗೆ ಮಹಾಮಂಗಳಾರತಿ ಮತ್ತು ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಶ್ರೀ ಕಾವೇರಿ ಮಾತೆಯ ಪ್ರತಿಮೆಯನ್ನು ಪುಷ್ಪಗಳಿಂದ ಅಲಂಕರಿಸಿ ವಿವಿಧ ಬಗೆಯ ಭಕ್ಷ್ಯ ಭೋಜ್ಯಗಳನ್ನು ನೈವೇದ್ಯಕ್ಕಿರಿಸಿ ಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಹಾಗೂ ಹಿರಿಯ ಪತ್ರಕರ್ತ ಹಾಗೂ ಬರಹಗಾರ ಬಿ.ಆರ್. ನಾರಾಯಣ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಮಾತನಾಡಿ, ಕಾವೇರಿ ಕಳೆದೆರಡು ವರ್ಷಗಳಿಂದ ಉಗ್ರ ಸ್ವರೂಪಿಣಿಯಾಗಿ ಹಲವಾರು ಜನರನ್ನು ಸಂಕಷ್ಟಕ್ಕೆ ಈಡುಮಾಡಿದೆ. ಮಾನವ ನಿರ್ಮಿತ ಚಟುವಟಿಕೆಗಳಿಂದ ಪ್ರಕೃತಿಯ ವಿಕೋಪಕ್ಕೆ ಕಾರಣಕರ್ತರಾಗುತ್ತಿದ್ದೇವೆ. ಪ್ರಕೃತಿಯನ್ನು ಉಳಿಸಿ ಬೆಳೆಸಬೇಕಾಗಿರುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಚರಣಿಯಂಡ ಅಪ್ಪಣ್ಣ, ಹೊರ ರಾಜ್ಯ ಹಾಗೂ ದೇಶಗಳಿಂದ ಕೊಡಗಿಗೆ ಆಗಮಿಸುವ ಪ್ರವಾಸಿಗರು ಕೊಡಗಿನ ಗಡಿ ಭಾಗದಲ್ಲಿರುವ ಈ ಪವಿತ್ರ ಶ್ರೀ ಕಾವೇರಿ ಗುಡಿಗೆ ನಮಿಸಿ ಪ್ರವೇಶಿಸುವಂತಹ ಕಾರ್ಯ ನಡೆಯುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ.

ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ತೀರ್ಥ ಸ್ವರೂಪಿಣಿ ಶ್ರೀ ಕಾವೇರಿ ಮಾತೆಯ ಪವಿತ್ರ ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಕಾರ್ಯ ನಡೆಯಿತು.

ಈ ಸಂದರ್ಭ ಎಸ್‍ಎಲ್‍ಎನ್ ಸಂಸ್ಥೆಯ ಮುಖ್ಯಸ್ಥ ಸಾತಪ್ಪನ್ ಮತ್ತು ಕುಟುಂಬಸ್ಥರು, ಬಾರವಿ ಕಾವೇರಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಚಂದ್ರು, ರುದ್ರ ಮತ್ತಿತರರು ಇದ್ದರು.ನಾಪೆÉÇೀಕ್ಲು: ನಾಪೆÇೀಕ್ಲುವಿನ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 23ನೇ ವರ್ಷದ ಕಾವೇರಿ ರಥ ಯಾತ್ರೆಯ ಮೂಲಕ ಭಕ್ತಾದಿಗಳಿಗೆ ಕಾವೇರಿ ತೀರ್ಥ ವಿತರಿಸಲಾಯಿತು.

ತಲಕಾವೇರಿ ತೀರ್ಥೋದ್ಭವದ ನಂತರ ಶ್ರೀ ಕಾವೇರಿ ಮಾತೆಯ ಪವಿತ್ರ ತೀರ್ಥದೊಂದಿಗೆ ರಥಯಾತ್ರೆಯು ತಾ. 18 ರ ಬೆಳಿಗ್ಗೆ 6 ಗಂಟೆಗೆ ಭಾಗಮಂಡಲದಿಂದ ಹೊರಟು, ಚೇರಂಗಾಲ, ಅಯ್ಯಂಗೇರಿ, ಬಲ್ಲ, ಸಣ್ಣಪುಲಿಕೋಟು, ದೊಡ್ಡಪುಲಿಕೋಟು, ಪೇರೂರು, ಬಲ್ಲಮಾವಟಿ, ನೆಲಜಿ, ಚೋನಾಕೆರೆ, ಹಳೇ ತಾಲೂಕು, ನಾಪೆÉÇೀಕ್ಲು ಪಟ್ಟಣದವರೆಗೆ ತೀರ್ಥ ವಿತರಿಸಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥ ಸ್ವೀಕರಿಸಿದರು.