ಮಡಿಕೇರಿ, ಅ. 20: ತೋಟಗಾರಿಕೆ ಇಲಾಖೆಯ ಆಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ 2019-20ನೇ ಸಾಲಿನಲ್ಲಿ ರಾಜ್ಯದಲ್ಲಿ ಇಲಾಖೆ ವತಿಯಿಂದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 20 ಅಭ್ಯರ್ಥಿಗಳಿಗೆ 3 ತಿಂಗಳ ಜೇನು ಕೃಷಿ ತರಬೇತಿಯು ಮಡಿಕೇರಿ ತಾಲೂಕಿನ ಭಾಗಮಂಡಲ ಜೇನು ಕೃಷಿ ತರಬೇತಿ ಕೇಂದ್ರದಲ್ಲಿ ನವೆಂಬರ್ 1 ರಿಂದ 31 ರವರೆಗೆ ರೈತರ ಮಕ್ಕಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.

ತರಬೇತಿ ಪಡೆಯಲು ಕನಿಷ್ಟ ಎಸ್‍ಎಸ್‍ಎಲ್‍ಸಿ ಯಲ್ಲಿ ಉತ್ತಿರ್ಣರಾಗಿರಬೇಕು. ತರಬೇತಿಗೆ ಬರುವ ಅಭ್ಯರ್ಥಿಗಳು 18 ರಿಂದ 35 ವರ್ಷ ವಯಸ್ಸಿನ ಪುರುಷ ಅಭ್ಯರ್ಥಿಗಳಾಗಿರಬೇಕು. ತರಬೇತಿಗೆ ಪ್ರವೇಶ ಬಯಸುವ ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ನೀಡುವದು ಕಡ್ಡಾಯವಾಗಿರುತ್ತದೆ ಕೊಡಗು ಜಿಲ್ಲೆಯ ಸಾಮಾನ್ಯ ವರ್ಗಕ್ಕೆ ಒಂದು ಗುರಿ ಮತ್ತು ಪರಿಶಿಷ್ಟ ಜಾತಿಗೆ ಒಂದು ಗುರಿಯನ್ನು ನಿಗದಿಪಡಿಸಲಾಗಿರುತ್ತದೆ.

ಅರ್ಜಿ ಪಾರಂಗಳನ್ನು ಇಲಾಖೆಯ ವೆಬ್‍ಸೈಟ್ ತಿತಿತಿ.hoಡಿಣiಛಿuಟಣuಡಿe. ಞಚಿಡಿಟಿಚಿಣಚಿಞs.gov.iಟಿ ನಲ್ಲಿ ತಾ. 26 ರವರೆಗೆ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ತಾ. 28 ಸಂದರ್ಶನದ ದಿನ. ತಾ. 30 ರಂದು ಆಯ್ಕೆ ಪಟ್ಟಿಯನ್ನು ಪ್ರಕಟಿಸುವದು ಹಾಗೂ ಪ್ರವೇಶ ಪತ್ರ ನೀಡುವದು. ಆಯ್ಕೆಯಾದ ಅಭ್ಯರ್ಥಿಗಳು ಭಾಗಮಂಡಲ ಜೇನು ಕೃಷಿ ತರಬೇತಿ ಕೇಂದ್ರಕ್ಕೆ ನವೆಂಬರ್ 1 ರಂದು ಹಾಜರಾಗಬೇಕಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ದೂ. 08272-228432, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.)ಮಡಿಕೇರಿ 08272-298655 ಹಾಗೂ ಭಾಗಮಂಡಲ ತರಬೇತಿ ಕೇಂದ್ರದ ದೂ. 08272-243316 ನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕ ಚಂದ್ರಶೇಖರ ತಿಳಿಸಿದ್ದಾರೆ.