ಕೂಡಿಗೆ, ಅ. 19: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಲು ಕೂಡಿಗೆ ಗ್ರಾಮ ಪಂಚಾಯ್ತಿಯಿಂದ ಈಗಾಗಲೇ ಉದ್ದೇಶಿಸಲಾಗಿದೆ. ಆದರೆ, ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದಾರೆ. ಅಲ್ಲದೆ, ಬ್ಯಾಡಗೊಟ್ಟ ಪರಿಶಿಷ್ಟ ಜಾತಿಯ 25ಕ್ಕೂ ಹೆಚ್ಚು ಕುಟುಂಬಗಳು ಕಸವಿಲೇವಾರಿ ಘಟಕ ನಿರ್ಮಿಸಲು ಉದ್ದೇಶಿಸಿರುವ ಜಾಗದ ಸಮೀಪದಲ್ಲಿ ಇರುವದರಿಂದ ಗ್ರಾಮಸ್ಥರು ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುವ ಬಗ್ಗೆ ವಿರೋಧಿಸಿದ್ದಾರೆ.

ಈ ಘಟಕ ಪ್ರಾರಂಭಗೊಂಡಲ್ಲಿ ಕೂಡಿಗೆ, ಅ. 19: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಲು ಕೂಡಿಗೆ ಗ್ರಾಮ ಪಂಚಾಯ್ತಿಯಿಂದ ಈಗಾಗಲೇ ಉದ್ದೇಶಿಸಲಾಗಿದೆ. ಆದರೆ, ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದಾರೆ. ಅಲ್ಲದೆ, ಬ್ಯಾಡಗೊಟ್ಟ ಪರಿಶಿಷ್ಟ ಜಾತಿಯ 25ಕ್ಕೂ ಹೆಚ್ಚು ಕುಟುಂಬಗಳು ಕಸವಿಲೇವಾರಿ ಘಟಕ ನಿರ್ಮಿಸಲು ಉದ್ದೇಶಿಸಿರುವ ಜಾಗದ ಸಮೀಪದಲ್ಲಿ ಇರುವದರಿಂದ ಗ್ರಾಮಸ್ಥರು ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುವ ಬಗ್ಗೆ ವಿರೋಧಿಸಿದ್ದಾರೆ.

ಈ ಘಟಕ ಪ್ರಾರಂಭಗೊಂಡಲ್ಲಿ ಹಾಕಲಾಗುತ್ತದೆ. ಅದನ್ನು ಬೇರೆ ಬೇರೆ ಮಾಡುವದಿಲ್ಲ. ಹಾಗೆ ಹಸಿ ಮತ್ತು ಒಣ ಕಸ ಎರಡನ್ನು ಇಲ್ಲಿಗೆ ಹಾಕುವದರಿಂದ ದುರ್ವಾಸನೆ ಬರುತ್ತದೆ, ರೋಗ ರುಜಿನಗಳು ಹರಡುತ್ತವೆ. ಇದರಿಂದ ಹತ್ತಿರವಿರುವ ನಾವು ಹೇಗೆ ತಾನೆ ವಾಸಿಸಲು ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾದರೆ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸುವದಾಗಿ ದಲಿತ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಅಣ್ಣಯ್ಯ, ಸ್ಥಳೀಯರಾದ ಗಣೇಶ್, ದೇವಯ್ಯ, ಚಂದ್ರು ಮತ್ತಿತರರು ಹೇಳಿದ್ದಾರೆ.