ಎಸ್.ಐ. ಮಂಚಯ್ಯ

ನಾಪೆÇೀಕ್ಲು, ಅ. 18: ಸೂಕ್ತ ದಾಖಲಾತಿ ಹೊಂದದೆ ಸಂಚಾರಿ ಕಾನೂನು ಉಲ್ಲಂಘಿಸುವ ಆಟೋ ಚಾಲಕರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಆರ್. ಮಂಚಯ್ಯ ಎಚ್ಚರಿಸಿದ್ದಾರೆ.

ಪೆÇಲೀಸ್ ಠಾಣೆಯಲ್ಲಿ ಕರೆದಿದ್ದ ಆಟೋ ಚಾಲಕ ಮತ್ತು ಮಾಲಿಕರ ಸಭೆಯಲ್ಲಿ ಅವರು ಮಾತನಾಡಿದರು. ಸರಿಯಾದ ದಾಖಲಾತಿ ಹೊಂದಿರುವ ಆಟೋಗಳಿಗೆ ಎನ್‍ಪಿಕೆ ಸಂಖ್ಯೆ ಅಳವಡಿಸುವ ಕಾರ್ಯ ನಡೆಯುತ್ತಿದೆ. ದಾಖಲಾತಿ ಸರಿಪಡಿಸಿಕೊಳ್ಳಲು ಆಟೋ ಚಾಲಕರಿಗೆ ತಾ. 31 ರವರೆಗೆ ಗಡುವು ನೀಡಲಾಗಿದೆ. ತಪ್ಪಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.

ಮದ್ಯಪಾನ ಮಾಡಿ ಆಟೋ ಓಡಿಸಿದ್ದಲ್ಲಿ ಆಟೋ ರಿಕ್ಷಾವನ್ನು ಮುಟ್ಟುಗೋಲು ಹಾಕಲಾಗುವದು. ಚಾಲಕರು ಖಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ನಿಗದಿತ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕು. ಸರಿಯಾದ ಬಾಡಿಗೆ ಹಣ ಮಾತ್ರ ಪಡೆಯಬೇಕು. ಪ್ರಯಾಣಿಕರೊಂದಿಗೆ ಸಭ್ಯತೆಯಿಂದ ವರ್ತಿಸಬೇಕು. ಪಟ್ಟಣದಲ್ಲಿ ಬಾಡಿಗೆ ಹುಡುಕಿಕೊಂಡು ಓಡಾಡುವ ಆಟೋಗಳ ರಿಕ್ಷಾಗಳ ಬಗ್ಗೆ ನಿಗಾ ಇರಿಸಲಾಗುವದು. ಯಾವದೇ ಆಟೋ ಚಾಲಕರ ವಿರುದ್ಧ ದೂರುಗಳಿದ್ದಲ್ಲಿ ನನಗೆ ಮಾಹಿತಿ ನೀಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವದು. ಮಾಹಿತಿಯನ್ನು ಗೌಪ್ಯವಾಗಿಡಲಾಗುವದು ಎಂದು ತಿಳಿಸಿದರು.

ವಾಹನ ನಿಲುಗಡೆ ಸ್ಥಳ ಗುರುತಿಸುವದು, ನಾಮ ಫಲಕ ಅಳವಡಿಸುವ ಕಾರ್ಯ ಶೀಘ್ರದಲ್ಲಿಯೇ ನಡೆಸಲಾಗುವದು ಎಂದು ತಿಳಿಸಿದರು. ಸಭೆಯಲ್ಲಿ ಎಎಸ್‍ಐಗಳಾದ ದೇವರಾಜ್, ವಿಶ್ವನಾಥ್ ನಾಪೋಕ್ಲು ವಾಹನ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಮತ್ತಿತರರಿದ್ದರು.