ಮಡಿಕೇರಿ, ಅ. 18 : ಕೆಪಿಸಿಸಿ ಆದೇಶದಂತೆ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ 6 ಬ್ಲಾಕ್ ಅಧ್ಯಕ್ಷರುಗಳ ಮುಂದುವರಿಕೆ ಅಥವಾ ಬದಲಾವಣೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಕೆಪಿಸಿಸಿ ವೀಕ್ಷಕರುಗಳು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.

ತಾ. 21 ಬೆಳಿಗ್ಗೆ 11 ಗಂಟೆಗೆ ವೀಕ್ಷಕÀ ಟಿ.ಎಂ. ಶಾಹಿದ್ ಅವರು ಪೆÇನ್ನಂಪೇಟೆ ಬ್ಲಾಕ್ ಮತ್ತು ಮಧ್ಯಾಹ್ನ 3 ಗಂಟೆಗೆ ವೀರಾಜಪೇಟೆ ಬ್ಲಾಕ್‍ಗೆ ಭೇಟಿ ನೀಡಲಿದ್ದಾರೆ.

ತಾ. 24 ರಂದು ವೀಕ್ಷಕ ವೆಂಕಪ್ಪಗೌಡ ಅವರು ಬೆಳಿಗ್ಗೆ 11 ಗಂಟೆಗೆ ಸೋಮವಾರಪೇಟೆ ಬ್ಲಾಕ್, ಮಧ್ಯಾಹ್ನ 3 ಗಂಟೆಗೆ ಕುಶಾಲನಗರ ಬ್ಲಾಕ್, ತಾ. 26 ರಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿ ಬ್ಲಾಕ್ ಹಾಗೂ ಮಧ್ಯಾಹ್ನ 3 ಗಂಟೆಗೆ ನಾಪೆÇೀಕ್ಲು ಬ್ಲಾಕ್‍ಗಳಿಗೆ ಭೇಟಿ ನೀಡಲಿದ್ದಾರೆ.

ಈ ಬ್ಲಾಕ್‍ಗಳ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಎಲ್ಲ ಮುಂಚೂಣಿ ಘಟಕ ಮತ್ತು ವಲಯ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರುಗಳು ವೀಕ್ಷಕರು ಆಗಮಿಸುವ ಸಂದರ್ಭ ಹಾಜರಿರಬೇಕೆಂದು ಮಂಜುನಾಥ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಭೇಟಿ ಸ್ಥಳವನ್ನು ಆಯಾ ಬ್ಲಾಕ್ ಅಧ್ಯಕ್ಷರುಗಳು ನಿಗದಿಪಡಿಸಿ ತಿಳಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.