ಕಡಂಗ, ಅ. 18: ಜಿಲ್ಲೆಯ ವೀರಾಜಪೇಟೆ ವಿಧಾನಸಬಾ ಕ್ಷೇತ್ರಕ್ಕೆ ಒಳಪಟ್ಟ ಕಕ್ಕಬೆ ಗ್ರಾಮ ಪಂಚಾಯತಿಯ ವಿವಿಧ ರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ನಾಲ್ಕುನಾಡು ಅರಮನೆ ರಸ್ತೆಗೆ ರೂ. 3 ಕೋಟಿ ಮತ್ತು ಕುಂಜಿಲ ಪೈನೆರಿ ಮಕಾಮ್ ರಸ್ತೆಗೆ ರೂ. 1.50 ಕೋಟಿ ವೆಚ್ಚದ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯರಾದ ಸಂತು ಸುಬ್ರಮಣಿ, ಉಮಾಪ್ರಭು, ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರ್ತಂಡ ಶೀಲಾ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು. ಶಾಸಕರನ್ನು ಸಮಸ್ತ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.
- ನೌಫಲ್ ಕಡಂಗ