ಚೆಟ್ಟಳ್ಳಿ, ಅ. 18: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂಪೂರ್ಣ ಮನೆ ಕಳೆದುಕೊಂಡ ನಾಪೋಕ್ಲು, ಬಲಮುರಿ, ಬೇತ್ರಿ, ಕೊಂಡಂಗೇರಿ, ನೆಲ್ಲಿಹುದಿಕೇರಿ, ಗುಹ್ಯದ ಸಂತ್ರಸ್ತರಿಗೆ ಮನೆ ನಿರ್ಮಿಸಲು ಕೊಡಗು ಜಿಲ್ಲಾ ಸುನ್ನಿ ಯುವಜನ ಸಂಘ ಹಾಗೂ ಕೊಡಗು ಸುನ್ನಿ ವೆಲ್ಫೇರ್ ಅಸೋಸಿ ಯೇಷನ್ ವತಿಯಿಂದ ಸಹಾಯ ಧನವನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಎಸ್.ವೈ.ಎಸ್. ಅಧ್ಯಕ್ಷ ಹಫೀಳ್ ಸಹದಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದಕೊಂಡ ಜನತೆಗೆ ಮನೆ ನಿರ್ಮಿಸಲು ಎಸ್.ವೈ.ಎಸ್. ಸ್ವಾಂತನ ವಿಭಾಗ ಹಾಗೂ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ಧನ ಸಹಾಯವನ್ನು ವಿತರಿಸುತ್ತಾ ಬಂದಿದೆ ಎಂದರು.

ಜಿಲ್ಲಾ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಶಾದುಲಿ ಫೈಝಿ, ಎಸ್.ವೈ.ಎಸ್. ಖಜಾಂಚಿ ಯೂಸುಫ್ ಕೊಂಡಂಗೇರಿ, ಎಸ್.ವೈ.ಎಸ್. ಇಸಾಬ ಟೀಮ್ ಮುಖ್ಯಸ್ಥ ಉಮರ್ ಸಖಾಫಿ, ಅನ್ವಾರುಲ್ ಹುದಾ ಎಜುಕೇಶನ್ ಸೆಂಟರ್ ಮುಖ್ಯಸ್ಥ ಅಶ್ರಫ್ ಅಹ್ಸನಿ, ಎಸ್.ವೈ.ಎಸ್ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಸಖಾಫಿ, ಮುಸ್ತಫಾ, ಹಂಸ ಅಲವಿ ಹಾಜಿ, ಅಬ್ದುಲ್ಲಾ, ಹಂಸ ಮುಸ್ಲಿಯಾರ್, ಸುನ್ನಿ ವೆಲ್ಫೇರ್ ಸದಸ್ಯ ಖಾಸಿಂ ಸಖಾಫಿ ಇದ್ದರು.