ಮಡಿಕೇರಿ, ಅ. 16: ಉತ್ತರ ಭಾರತದಲ್ಲಿ ನ. 11 ರಿಂದ 24 ರವರೆಗೆ ನಡೆಯಲಿರುವ ಸಿಬಿಎಸ್ಸಿ ಸ್ಕೂಲ್ ಗೇಮ್ ಜೋನ್ ಟೆಕ್ವಾಂಡೋ ಚಾಂಪಿಯನ್ ಶಿಪ್ಗೆ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್ನ ವಿದ್ಯಾರ್ಥಿ ಚೇತನಶ್ರೀ ಆಯ್ಕೆಯಾಗಿದ್ದಾರೆ.
ಪಂದ್ಯಾವಳಿಯಲ್ಲಿ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ವಿವಿಧ ಸಿಬಿಎಸ್ಸಿ ಶಾಲೆಯ ಪದಕ ಗಳಿಸಿದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ನಿಫಾನಿಯಲ್ಲಿ ನಡೆದ ಸಿಬಿಎಸ್ಸಿ ಸ್ಕೂಲ್ ಗೇಮ್ನ ಸೌತ್ ಜೋನ್ ಟೆಕ್ವಾಂಡೋ ಚಾಂಪಿಯನ್ ಶಿಪ್ನಲ್ಲಿ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಎಂ.ಜೆ.ಅಕ್ಷಯ್, ಎಂ.ಜೆ. ವಿಜಯ್, ಮಾನ್ಯ ಹಾಗೂ ಮೈಸೂರಿನ ಈಸ್ಟ್-ವೆಸ್ಟ್ ಶಾಲೆಯ ವಿದ್ಯಾರ್ಥಿನಿ ಚೇತನಶ್ರೀ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಈ ವಿದ್ಯಾರ್ಥಿಗಳು ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್ನ ಮಾಸ್ಟರ್ ಕುಶಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.