ಕೂಡಿಗೆ, ಅ. 16: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ಹೆದ್ದಾರಿಗೆ ಹೊಂದಿಕೊಂಡಂತಿರುವ ಆನೆಕೆರೆ-ಸುಬ್ರಹ್ಮಣ್ಯ ರಸ್ತೆ - ಹಾರಂಗಿ ರಸ್ತೆ ಜೋಡಣೆ ರಸ್ತೆಯು ತೀರಾ ಹಾಳಾಗಿದ್ದು, ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸಲು ಯೋಗ್ಯವಾಗಿಲ್ಲ. ಹಾರಂಗಿಯಿಂದ ಕೂಡಿಗೆ ಮಾರ್ಗವಾಗಿ ರಾಜ್ಯ ಹೆದ್ದಾರಿಗೆ ತೆರಳಲು ಹತ್ತಿರದ ರಸ್ತೆಯಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಸ್ತೆಯನ್ನು ದುರಸ್ತಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರವಾಸಿಗರು ಹಾರಂಗಿಗೆ ತೆರಳಲು ಈ ರಸ್ತೆಯು ಹತ್ತಿರದ ಸಂಪರ್ಕವಾಗಿದ್ದು, ಹಾಸನ ಕಡೆಯಿಂದ ಬರುವ ಹೆಚ್ಚಿನ ಪ್ರವಾಸಿಗರ ದಂಡು ಈ ರಸ್ತೆಯ ಮೂಲಕವೇ ಹಾರಂಗಿಗೆ ತೆರಳುತ್ತಾರೆ. ಆದ್ದರಿಂದ ಹಾಳಾಗಿರುವ ರಸ್ತೆಯ ದುರಸ್ತಿ ಕಾಮಗಾರಿ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.