ಮಡಿಕೇರಿ, ಅ. 16: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಶನಿವಾರಸಂತೆ ಸಮೀಪದ ಗೌಡಳ್ಳಿಯಲ್ಲಿ ನಡೆಯುತ್ತಿರುವ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭವು ತಾ. 17 ರಂದು (ಇಂದು) ಸಂಜೆ 4.30 ಗಂಟೆಗೆ ನಡೆಯಲಿದೆ.
ಗೌಡಳ್ಳಿಯ ಆದಿ ಚುಂಚನಗಿರಿ ಮಠದ ಬಿಜಿಎಸ್ ವಿದ್ಯಾಸಂಸ್ಥೆ ಆವರಣದಲ್ಲಿ ಒಂದು ವಾರದಿಂದ ನಡೆಯುತ್ತಿರುವ ಶಿಬಿರದಲ್ಲಿ ಶಾರೀರಿಕ, ಬೌದ್ಧಿಕ, ವೈಚಾರಿಕ ವಿಚಾರಧಾರೆ ಯೊಂದಿಗೆ ರಾಷ್ಟ್ರೀಯ ಮೌಲ್ಯಗಳ ಕುರಿತು ಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.
ಇಂದು ಗಣವೇಷಧಾರಿ ಶಿಬಿರಾರ್ಥಿಗಳಿಂದ ಶಾರೀರಿಕ ಪ್ರದರ್ಶನ ಮತ್ತು ಸಮಾರೋಪ ನಡೆಯಲಿದ್ದು, ನಿವೃತ್ತ ಬ್ಯಾಂಕ್ ಅಧಿಕಾರಿ ಎಂ.ಬಿ. ಚಿನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಪುತ್ತೂರು ಜಿಲ್ಲಾ ಕಾರ್ಯವಾಹ ಸುಭಾಶ್ಚಂದ್ರ ಬೌದ್ಧಿಕ್ ನೀಡಲಿದ್ದಾರೆ ಎಂದು ವರ್ಗ ಕಾರ್ಯವಾಹ ಕುಟ್ಟಂಡ ಮಿರನ್ ಕಾವೇರಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.