ಚೆಟ್ಟಳ್ಳಿ, ಅ. 15: ವೀರಾಜಪೇಟೆಯಲ್ಲಿರುವ ಸಮನ್ವಯ ವಿದ್ಯಾ ಕೇಂದ್ರವಾದ ಅನ್ವಾರುಲ್ ಹುದಾ ಇದರ ವಿಜ್ಞಾನ ಪ್ರಯೋಗಾಲಯಕ್ಕೆ ರಿಯಾದ್ ಅನ್ವಾರುಲ್ ಹುದಾ ಸಮಿತಿ ದಾನಿಗಳಿಂದ ಸಂಗ್ರಹಿಸಿದ ಒಂದೂವರೆ ಲಕ್ಷ ರೂಪಾಯಿ ಅನ್ನು ಮುಸ್ತಫಾ ಸಖಾಫಿ ಅವರ ಮುಖಾಂತರ ಅನ್ವಾರುಲ್ ಹುದಾ ವಿದ್ಯಾ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಅನ್ವಾರುಲ್ ಹುದಾ ರಿಯಾದ್ ಸಮಿತಿ ಅಧ್ಯಕ್ಷ ಹಂಸ ಉಸ್ತಾದ್ ಚೋಕಂಡಳ್ಳಿ, ಸಮಿತಿ ಸದಸ್ಯರುಗಳು ಇದ್ದರು.