ಗುಡ್ಡೆಹೊಸೂರು ಅ. 14 : ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ನಿವಾಸಿ ದಿ.ಚಂದಪ್ಪ ಅವರ ಪುತ್ರ ಹಿಂದೂಪರ ಸಂಘಟನೆಯ ಕಾರ್ಯಕರ್ತ ಪ್ರವೀಣ್‍ಪೂಜಾರಿ ಹತ್ಯೆಯಾದ ಬಳಿಕ ಸಂಸದ ಪ್ರತಾಪ್ ಸಿಂಹ ಅವರು ರೂ. 5 ಲಕ್ಷ ಹಣವನ್ನು ಸಹಾಯಾರ್ಥ ಗುಡ್ಡೆಹೊಸೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು. ಈ ಹಣದ ಬಾಂಡ್‍ನ್ನು ಪ್ರತಾಪ್‍ಸಿಂಹ ಅವರ ಸಹೋದರ ರಾಜೇಂದ್ರಸಿಂಹ ಅವರು ಪ್ರವೀಣ್ ಅವರ ಮನೆಗೆ ಭೇಟಿ ನೀಡಿ ಪ್ರವೀಣ್ ಸಹೋದರಿ ಸುನಿತಾ ಅವರಿಗೆ ನೀಡಿದರು. ಈ ಸಂದರ್ಭ ಪಿರಿಯಾಪಟ್ಟಣದ ಮಾಗಳ್ಳಿ ಸ್ವಾಮಿ, ಅನಿಲ್, ಪ್ರಸಾದ್, ಕಾರ್ತಿಕ್, ಅರುಣ್, ನಾಗೇಶ್ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ಸದಸ್ಯ ಪ್ರವೀಣ್ ಮುಂತಾದವರು ಹಾಜರಿದ್ದರು.