ಶನಿವಾರಸಂತೆ, ಅ. 14: ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದ ಕೂಲಿ ಕಾರ್ಮಿಕ ಚಂದ್ರಪ್ಪ (56) ಅವರ ಮೃತದೇಹ ಮಾಲಂಬಿಯ ಸಾರ್ವಜನಿಕ ಕೆರೆಯಲ್ಲಿ ಪತ್ತೆಯಾಗಿದ್ದು, ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಚಂದ್ರಪ್ಪ ಅವರು ತಾ. 12ರಂದು ಸಂಜೆ ಮನೆಯಿಂದ ಸಿದ್ಧಲಿಂಗಪುರದಲ್ಲಿ ಚೌಡಿ ಹಬ್ಬಕ್ಕೆ ಹೋಗುತ್ತೇನೆ ಎಂದು ತೆರಳಿ ಭಾನುವಾರವೂ ಮನೆಗೆ ಬಾರದೆ ಇಂದು ಶವವಾಗಿ ಪತ್ತೆಯಾಗಿದ್ದಾರೆ.