ಮಡಿಕೇರಿ, ಅ. 13: ಪ್ರಾದೇಶಿಕ ಸಾರಿಗೆ ಕಚೇರಿ ಕೆಲಸ ಕಾರ್ಯಗಳಲ್ಲಿ ಮಧ್ಯವರ್ತಿಗಳು, ಬ್ರೋಕರ್ಸ್, ದಲ್ಲಾಳಿಗಳು ಎಂದು ಹೇಳಿಕೊಂಡು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ವ್ಯವಹರಿಸಲಾಗುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆ ಕಚೇರಿಗೆ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಯ ಮುಖ್ಯಸ್ಥರು, ಅಧೀಕ್ಷಕರು, ಮತ್ತು ಮೋಟಾರು ವಾಹನ ನಿರೀಕ್ಷಕರುಗಳನ್ನು ನೇರವಾಗಿ ಸಂಪರ್ಕಿಸಬಹುದಾಗಿದ್ದು, ತಮ್ಮ ಕೆಲಸ ಕಾರ್ಯಗಳ ಅರ್ಜಿಗಳನ್ನು ಆನ್‍ಲೈನ್ ಮುಖಾಂತರ ಸಲ್ಲಿಸಬಹುದಾಗಿದ್ದು, ತಿತಿತಿ.ಠಿಚಿಡಿivಚಿhಚಿಟಿ. gov.iಟಿ ನಲ್ಲಿ ವಿವರಗಳು ಲಭ್ಯವಿರುತ್ತದೆ.

ಪ್ರತಿ ಕೆಲಸಕ್ಕೆ ಪಾವತಿಸಬೇಕಾಗಿರುವ ಅರ್ಜಿ ಶುಲ್ಕ, ತೆರಿಗೆ ಇತ್ಯಾದಿ ವಿವರಗಳನ್ನು ಕಚೇರಿ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗಿದ್ದು, ಆನ್‍ಲೈನ್‍ನಲ್ಲೂ ಮಾಹಿತಿ ಲಭ್ಯವಿರುತ್ತದೆ. ಕಚೇರಿಯಲ್ಲಿ ಯಾವದೇ ಮಧ್ಯವರ್ತಿ, ದಲ್ಲಾಳಿಗಳಿಗೆ ಅವಕಾಶವಿಲ್ಲವಾದ್ದರಿಂದ ಸಾರ್ವಜನಿಕರು ಅವರ ಕೆಲಸ ಕಾರ್ಯಗಳಿಗೆ ಅವರ ಪರವಾಗಿ ಬೇರೆಯನ್ನು ಕಳುಹಿಸಿಕೊಡುವದಿದ್ದಲ್ಲಿ ಅವರ ಸಹಿ ದೃಢೀಕರಿಸಿದ ಅಧಿಕೃತ ಪತ್ರ (ಆಥರೈಸೇಷನ್ ಲೆಟರ್) ಕಳುಹಿಸಿಕೊಡಬಹುದಾಗಿದೆ. ಅರ್ಜಿಯೊಂದಿಗೆ ಅಂಚೆ ಚೀಟಿ ಲಗತ್ತಿಸಿ ಸ್ವವಿಳಾಸದ ಅಂಚೆ ಲಕೋಟೆ ಲಗತ್ತಿಸಬೇಕೆಂದು ತಿಳಿಯಪಡಿಸಲಾಗಿದೆ. ದಾಖಲಾತಿಗಳ್ನು ಸ್ಪೀಡ್ ಪೋಸ್ಟ್ ಮುಖಾಂತರ ಸಕಾಲ ಯೋಜನೆಯಡಿ ನಿಗದಿಪಡಿಸಿರುವ ಕಾಲಮಿತಿಯೊಳಗೆ ಕಳುಹಿಸಲಾಗುವದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ಮಂಜುನಾಥ್ ಶಿರಾಲಿ ತಿಳಿಸಿದ್ದಾರೆ.