ಮಡಿಕೇರಿ ಅ. 12: ಮಡಿಕೇರಿಯ ಮಾನವೀಯ ಸ್ನೇಹಿತರ ಒಕ್ಕೂಟವು ಸಮಾಜದಲ್ಲಿ ನಿರ್ಗತಿಕರಾದ ವಯೋವೃದ್ಧರು, ಅಂಗವಿಕಲರು, ಕೂಲಿ ಕಾರ್ಮಿಕರು, ಬಡ ವಿದ್ಯಾರ್ಥಿಗಳು ಹಾಗೂ ಜೀವನದಲ್ಲಿ ನೊಂದು ಬೆಂದು ಬಳಲುತ್ತಿರುವ ಬಡ ಜೀವಗಳಿಗೆ ನೆರವು ಕಾರ್ಯವನ್ನು ಮಾಡುತ್ತಿದೆ.
ಕೊಡಗಿನ ಯಾವದೇ ಊರುಗಳಲ್ಲಿ, ಯಾವದೇ ಜನಾಂಗದವರಿಗೆ ನೆರವಿನ ಅಗತ್ಯವಿದ್ದಲ್ಲಿ 984527579, 9481213920 ಸಂಪರ್ಕಿಸುವಂತೆ ಒಕ್ಕೂಟದ ಸದಸ್ಯ ಎಂ. ಇ. ಮಹಮ್ಮದ್ ಕೋರಿಕೊಂಡಿದ್ದಾರೆ.