*ಸಿದ್ದಾಪುರ, ಅ. 12: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯಿಂದ ಕಸದ ತ್ಯಾಜ್ಯವನ್ನು ತಂದು ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅತ್ತಿಮಂಗಲದಲ್ಲಿ ಸುರಿಯುತ್ತಿರುವದು ಖಂಡನೀಯ. ಈ ಕಸವನ್ನು ನಮ್ಮ ಗ್ರಾಮದಿಂದ ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ತಾ.21 ರಂದು ಪ್ರತಿಭಟನೆ ನಡೆಸಲಾಗುವದು ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ತಿಳಿಸಿದ್ದಾರೆ.
ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ತುರ್ತು ಸಾಮಾನ್ಯ ಸಭೆಯು ನಡೆಯಿತು. ಸದಸ್ಯರುಗಳು ನೆಲ್ಲಿಹುದಿಕೇರಿ ಗ್ರಾ.ಪಂ.ನಿಂದ ಜೀಪಿನಲ್ಲಿ ತಂದು ಕಸದ ತ್ಯಾಜ್ಯವನ್ನು ಅತ್ತಿಮಂಗಲದಲ್ಲಿ ಸುರಿಯುತ್ತಿರುವದರಿಂದ ರೋಗ ರುಜಿನಗಳಿಗೆ ಅವಕಾಶ ನೀಡಿದೆ. ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಜಿ.ಪಂ. ಸಿಇಓ ಅವರು ಸಮಸ್ಯೆಗೆ ಒಂದು ವಾರದೊಳಗೆ ಪರಿಹಾರ ಕಂಡುಕೊಳ್ಳಬೇಕು ಇಲ್ಲದಿದ್ದಲ್ಲಿ ತಾ. 21 ರಂದು ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಆಡಳಿತ ಮಂಡಳಿಯಿಂದ ಕಸದ ರಾಶಿಯ ಜಾಗದಲ್ಲಿ ಪ್ರತಿಭಟನೆ ನಡೆಸಲಾಗುವದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.