ನಾಪೋಕ್ಲು, ಅ. 9: ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸು ವದರಿಂದ ಪರಸ್ಪರ ಬಾಂಧವ್ಯ ವೃದ್ಧಿಯಾಗಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಯಲು ಹಾಗೂ ಜನಾಂಗದ ಒಗ್ಗಟ್ಟಿಗೆ ಸಹಕಾರಿಯಾಗಿದೆ ಎಂದು ನಿವೃತ್ತ ಕಂದಾಯ ಅಧಿಕಾರಿ ಮಂಞಪುರ ಕೇಶವ ಹೇಳಿದರು. ನರಿಯಂದಡ ಗ್ರಾಮದ ಅಯ್ಯಪ್ಪ ಯುವಕಸಂಘ ಮತ್ತು ನರಿಯಂದಡ ಗ್ರಾಮದ ಗೌಡ ಕುಟುಂಬಗಳು ಹಾಗೂ ನಂದಿನಿ ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕೈಲುಮುಹೂರ್ತ ಸಂತೋಷ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಯ್ಯಪ್ಪ ಯುವಕ ಸಂಘದ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷ ಬಿಳಿಯಂಡ್ರ ಲಕ್ಷ್ಮಣ ಉದ್ಘಾಟಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿಳಿಯಂಡ್ರ ರತೀಶ್‍ಕುಮಾರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ತೋಟಂಬೈಲು ಅನಂತಕುಮಾರ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಗ್ರಾಮದ ಗೌಡಕುಟುಂಬಗಳ ಪಟ್ಟೆದಾರರಾದ ಪೊಕ್ಕೊಳಂಡ್ರ ಆನಂದಯ್ಯ, ತೋಟಂಬೈಲು ಅಪ್ಪಚ್ಚು, ಮಂಞಪುರ ಕೇಶವ, ಬಿಳಿಯಂಡ್ರ ಸೋಮಣ್ಣ, ಕುವೆಯಂಡ್ರ ಬಿದ್ದಪ್ಪ, ದಾನಿಗಳಾದ ಪೊಕ್ಕೊಳಂಡ್ರ ಸಿದ್ಧಾರ್ಥ, ಪೊಕ್ಕೊಳಂಡ್ರ ಪಳಂಗಪ್ಪ, ಪೊಕ್ಕೊಳಂಡ್ರ ಜಯರಾಮ, ಪೊಕ್ಕೊಳಂಡ್ರ ಪೂರ್ಣಯ್ಯ, ಪಾಲ್ಗೊಂಡಿದ್ದರು. ನಂತರ ಕ್ರೀಡಾಕೂಟ ನೆರವೇರಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ಪೊಕ್ಕೊಳಂಡ್ರ ಧನೋಜ್ ಸ್ವಾಗತಿಸಿ ಪೊಕ್ಕೊಳಂಡ್ರ ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು. ತೀರ್ಪುಗಾರರಾಗಿ ಪೊಕ್ಕೊಳಂಡ್ರ ಮನೋಜ್, ಬಿಳಿಯಂಡ್ರ ಹರಿಪ್ರಸಾದ್, ಕಾರ್ಯನಿರ್ವಹಿಸಿದರು.