ಮಡಿಕೇರಿ, ಅ. 9 : ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ದಸರಾ ಜನೋತ್ಸವ ಅಂಗವಾಗಿ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. 7ರ ಆಯುಧ ಪೂಜಾ ಸಮಾರಂಭದಂದು ಜರುಗಿದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಬಿ.ಆರ್. ಸತೀಸ್ ತಂಡದಿಂದ ಕುಂಚ ಗಾಯನ, ಮಡಿಕೇರಿಯ ಅಲ್ಟಿಮೇಟ್ ವೇವ್ಸ್ ಡಾನ್ಸ್ ಅಕಾಡೆಮಿ ತಂಡದಿಂದ ನೃತ್ಯ, ಕನ್ನಡ ಕೋಗಿಲೆ ಖ್ಯಾತಿಯ ರಕ್ಷಿತ್ ಪಾಣತ್ತಲೆ, ಹರ್ಷ ಉಪ್ಪಾರ್ ತಂಡದಿಂದ ಗಾನಸುಧೆ, ಮಡಿಕೇರಿ ವಿನಯ ಕೃಷ್ಣಮೂರ್ತಿ ಹಳೆಯ ವಿದ್ಯಾರ್ಥಿಗಳಿಂದ ವಂದೇ ಮಾತರಂ ನೃತ್ಯ, ಸೋಮವಾರಪೇಟೆಯ ಅಡ್ವೆಂಚರ್ ಡ್ಯಾನ್ಸ್ ಸ್ಟುಡಿಯೋ ತಂಡದಿಂದ ನೃತ್ಯವೈವಿಧ್ಯ.
ಕೊಡಗು ಗೌಡ ಯುವ ವೇದಿಕೆ ತಂಡದಿಂದ ಗೌಡ ಸಾಂಸ್ಕøತಿಕ ನೃತ್ಯ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಗೀತ ರಸ ಸಂಜೆ, ಮಡಿಕೇರಿ ಕಿಂಗ್ಸ್ ಆಫ್ ಕೂರ್ಗ್ನ ಮಹೇಶ್ ಮತ್ತು ಕಿರಣ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.
ವಿಜಯದಶಮಿ
ತಾ. 8ರಂದು ನಡೆದ ಕಾರ್ಯಕ್ರಮದಲ್ಲಿ ಡಾ. ಶ್ರೀವಿದ್ಯಾಮುರಳೀಧರ್ ಸೌರಭ ಕಲಾ ತಂಡದಿಂದ ನೃತ್ಯವರ್ಷ, ಕುಕ್ಕೆ ಸುಬ್ರಹ್ಮಣ್ಯದ ಆರ್ಟ್ ಇನ್ ಮೋಶನ್ ಕಲಾ ತಂಡದಿಂದ ಡ್ಯಾನ್ಸ್ ಶೋ ನಡೆಯಿತು. ನಂತರ ಮಂಗಳೂರಿನ ಸ್ವರಾಗ್ ಸೌಂಡ್ಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿತು.