ನಾಪೆÇೀಕ್ಲು, ಅ. 9: ಕಾಂಗ್ರೆಸ್ ಮುಖಂಡ ಜನಾನುರಾಗಿ ದಿ. ಬಿದ್ದಾಟಂಡ ಟಿ. ಪ್ರದೀಪ್ ಅವರ ಜ್ಞಾಪಕಾರ್ಥ ನಾಪೆÇೀಕ್ಲು ಸಮೀಪದ ಕೊಳಕೇರಿ ಉಮಾಮಹೇಶ್ವರಿ ಯುವ ಸಂಘ ಆಯೋಜಿಸಿದ್ದ ಮುಕ್ತ ಬ್ಯಾಡ್ಮಿಂಟನ್ನ ಪುರುಷರ ವಿಭಾಗದಲ್ಲಿ ಚೇತನ್ ಮತ್ತು ತಂಡ, ಮಹಿಳಾ ವಿಭಾಗದಲ್ಲಿ ಶಿವಚಾಳಿಯಂಡ ನಿತ್ಯಾ ಮತ್ತು ತಾತಪಂಡ ಜ್ಯೋತಿ ವಿನ್ನರ್ಸ್ ಪ್ರಶಸ್ತಿ ಪಡೆದರು.
ಹಾಗೆಯೇ ಪುರುಷರ ವಿಭಾಗದಲ್ಲಿ ಇರ್ಶಾದ್ ಮತ್ತು ನೆಲ್ ಬೋಬಿ ದ್ವಿತೀಯ ಸ್ಥಾನ, ಮಹಿಳಾ ವಿಭಾಗದಲ್ಲಿ ಕಲ್ಲೇಂಗಡ ಗ್ರೀಷ್ಮಾ ಮತ್ತು ಸಪ್ನಾ ಪ್ರಶಸ್ತಿ ಪಡೆದರು. ವೆಟೆರೆನ್ಸ್ ವಿಭಾಗದಲ್ಲಿ ಬೊಪ್ಪೆರ ಜಯ ಹಾಗೂ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಪ್ರಶಸ್ತಿ ಪಡೆದರೆ, ಸಿದ್ದಾಪುರದ ತೋಮಸ್ ಮತ್ತು ಸಂತೋಷ್ ದ್ವಿತೀಯ ಸ್ಥಾನ ಪಡೆದರು. 15 ವರ್ಷದ ಒಳಗಿನ ಬಾಲಕರ ಪಂದ್ಯಾಟದಲ್ಲಿ ಬೊಪ್ಪೆರ ರಿತೇಶ್ ಮತ್ತು ಸಚಿನ್ ಪ್ರಥಮ ಸ್ಥಾನಗಳಿಸಿದರೆ, ಅರೆಯಡ ಸಾಗರ್ ಮತ್ತು ಕಾರೊಲ್ ದ್ವಿತೀಯ ಸ್ಥಾನ ಪಡೆದರು. 15 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಶಿವಚಾಳಿಯಂಡ ದೇಚಕ್ಕ ಅಂಬಿ ಹಾಗೂ ಶಿವಚಾಳಿಯಂಡ ಮಾನ್ಯ ಪ್ರಥಮ ಸ್ಥಾನ ಪಡೆದರೆ, ನಿಲಿಶಾ ಮತ್ತು ತ್ರಿಶಾ ದ್ವಿತೀಯ ಸ್ಥಾನ ಪಡೆದರು.
ಫೈನಲ್ ಪಂದ್ಯವನ್ನು ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿ ಯೇಶನ್ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಮತ್ತು ಬಿದ್ದಾಟಂಡ ಸುಮನ ಪ್ರದೀಪ್ ಉದ್ಘಾಟಿಸಿದರು.
ನಂತರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಡಾ. ಮೋಹನ್ ಅಪ್ಪಾಜಿ ಬಿ.ಟಿ. ಪ್ರದೀಪ್ ಜ್ಞಾಪಕಾರ್ಥವಾಗಿ ಉಮಾಮಹೇಶ್ವರಿ ಯುವ ಸಂಘದ ವತಿಯಿಂದ ನಡೆಸಲಾದ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾಟ ಪ್ರದೀಪ್ ಅವರ ಬದುಕಿನ ಮೌಲ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರ ಅಪ್ಪಾರಂಡ ಎಂ. ಅಪ್ಪಯ್ಯ ವಹಿಸಿದ್ದರು. ವೇದಿಕೆಯಲ್ಲಿ ಉಮಾ ಮಹೇಶ್ವರಿ ಯುವ ಸಂಘದ ಅಧ್ಯಕ್ಷ ಕಾಟುಮಣಿಯಂಡ ಉಮೇಶ್, ಬಿದ್ದಾಟಂಡ ಟಿ. ಜೀವನ್ ಕಾರ್ಯಪ್ಪ, ಬಿದ್ದಾಟಂಡ ಟಿ. ಸುಮನ ಪ್ರದೀಪ್, ಎಂ.ಎಂ. ನರೇಂದ್ರ, ಅಪ್ಪಚ್ಚಿರ ರೆಮ್ಮಿ ನಾಣಯ್ಯ ಮತ್ತಿತರರು ಇದ್ದರು.