ಮಡಿಕೇರಿ, ಅ. 9: ತಾ. 18ರ ತಲಕಾವೇರಿ ಜಾತ್ರೆ ಸಿದ್ಧತೆ ಹಿನ್ನೆಲೆ ಪರಿಶೀಲನೆಗಾಗಿ ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರ ಡಾ. ಸುಮನ್ ಡಿ.ಪಿ. ಇವರುಗಳು ತೆರಳಿದ್ದರು. ಅವರೊಂದಿಗೆ ಭಾಗಮಂಡಲ - ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರಿದ್ದು, ಪೂರ್ವ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಡಿ.ಸಿ. ಮತ್ತು ಎಸ್ಪಿ ಇವರುಗಳು ಬ್ರಹ್ಮಗಿರಿಯನ್ನು ಏರಿ ಅಲ್ಲಿ ಭೂಕುಸಿತವಾಗಿದ್ದ ಪ್ರದೇಶವನ್ನು ವೀಕ್ಷಿಸಿದ್ದು, ಅರಣ್ಯ ವಲಯಾಧಿಕಾರಿ ಮರಿಸ್ವಾಮಿ ಅವರಿಂದ ಬ್ರಹ್ಮಗಿರಿಯಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದರು. ಡಾ. ಸಣ್ಣುವಂಡ ಕಾವೇರಪ್ಪ ಮತ್ತಿತರರು ಇದ್ದರು.