ಸೋಮವಾರಪೇಟೆ, ಅ. 7: ಬೆಂಗಳೂರು 5ನೇ ಘಟಕದಿಂದ ಸೋಮವಾರಪೇಟೆ-ಬೆಂಗಳೂರು ಮಾರ್ಗದಲ್ಲಿ ನೂತನ ಬಸ್ ಸೇವೆ ಆರಂಭಿಸಲಾಗಿದೆ.

ನೂತನ ಬಸ್ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹೊರಟು ರಾಮನಗರ-ಮಂಡ್ಯ ಮಾರ್ಗವಾಗಿ ಮೈಸೂರಿಗೆ 5.30ಕ್ಕೆ ತಲಪಲಿದೆ. ಅಲ್ಲಿಂದ ಹೊರಟು ಹುಣಸೂರು-ಪಿರಿಯಾಪಟ್ಟಣ-ಕುಶಾಲನಗರ ಮಾರ್ಗವಾಗಿ ಸೋಮವಾರಪೇಟೆಗೆ 9 ಗಂಟೆಗೆ ತಲಪಲಿದೆ.

ಬೆಳಿಗ್ಗೆ 5 ಗಂಟೆಗೆ ಅದೇ ಮಾರ್ಗವಾಗಿ ಹೊರಟು ಮೈಸೂರಿಗೆ 8 ಗಂಟೆಗೆ ತಲುಪಲಿದ್ದು, 11.45ಕ್ಕೆ ಬೆಂಗಳೂರಿಗೆ ತಲುಪಲಿದೆ ಎಂದು ಬೆಂಗಳೂರು 5ನೇ ಘಟಕದ ವ್ಯವಸ್ಪಾಪಕರು ತಿಳಿಸಿದ್ದಾರೆ.