ಮಡಿಕೇರಿ, ಅ.6: ಮಲೇಷಿಯಾದ ಜೋಹಾರ್‍ಬರುವಿನಲ್ಲಿ ತಾ. 12ರಿಂದ ತಾ. 19ರವರೆಗೆ ಜರುಗಲಿರುವ 9ನೇ ಸುಲ್ತಾನ್ ಆಫ್ ಜೋಹಾರ್ ಕಪ್ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆ. ಭಾರತ ತಂಡದ ಕೋಚ್ ಆಗಿ ಕೊಡಗಿನವರಾದ ವೀರಾಜಪೇಟೆ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರು ನಿಯುಕ್ತಿಗೊಂಡಿದ್ದು, ಭಾರತ ತಂಡ ತಾ.7ರಂದು (ಇಂದು) ಮಲೇಷಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಕಾರ್ಯಪ್ಪ ಅವರು ಕಳೆದ ಹಲವಾರು ವರ್ಷಗಳಿಂದ ಭಾರತ ಹಾಕಿ ತಂಡದ ವಿವಿಧ ವಿಭಾಗದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪಂದ್ಯಾವಳಿಯಲ್ಲಿ ಭಾರತದೊಂದಿಗೆ ಜಪಾನ್, ನ್ಯೂಜಿಲ್ಯಾಂಡ್, ಮಲೇಷಿಯಾ, ಆಸ್ಟ್ರೇಲಿಯಾ, ಗ್ರೇಟ್‍ಬ್ರಿಟನ್ ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ.