ಮಡಿಕೇರಿ, ಅ. 5: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಟೀಂ ತ್ರಿಡಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವ ದಸರಾ ಯುವ ಮನಸುಗಳಿಗೆ ಮುದ ನೀಡಿತು. ವೈವಿಧ್ಯಮಯ ಕಾರ್ಯಕ್ರಮಗಳು ಸಹಸ್ರಾರು (ಮೊದಲ ಪುಟದಿಂದ) ಸಂಖ್ಯೆಯಲ್ಲಿ ನೆರೆದಿದ್ದ ಯುವಕ ಯುವತಿಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದವು.ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ, ನಗರ ದಸರಾ ಸಮಿತಿ ಅಧ್ಯಕ್ಷರೂ ಆದ ಅನೀಸ್ ಕಣ್ಮಣಿ ಜಾಯ್ ಉದ್ಘಾಟಿಸಿ, ಶುಭ ಹಾರೈಸಿದರು. ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪನ್ನೇಕರ್,ಜಿ.ಪಂ. ಸಿಇಒ ಲಕ್ಷ್ಮಿ ಪ್ರಿಯ, ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಖಜಾಂಚಿ ಉಮೇಶ್ ಸುಬ್ರಮಣಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್.ಬಿ.ರವಿ, ಯುವ ದಸರಾ ಸಮಿತಿ ಅಧ್ಯಕ್ಷ ಪ್ರಭುರೈ, ಪ್ರಜಾಸತ್ಯ ಸಂಪಾದಕ ಡಾ.ಬಿ.ಸಿ.ನವೀನ್ ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ನಗರ ಸಭಾ ಆಯುಕ್ತ ರಮೇಶ್, ಉದ್ಯಮಿಗಳಾದ ಜಯಂತಿ ಶೆಟ್ಟಿ, ಕೆ.ಕೆ.ದಾಮೋದರ್, ಸತೀಶ್, ಜಯಂತ್ ಪೂಜಾರಿ, ಲಕ್ಷಣ್ ವೇದಿಕೆಯಲ್ಲಿದ್ದರು.

ಸಾಂಸ್ಕೃತಿಕ ಸಮಿತಿ ಗೌರವ ಸಲಹೆಗಾರ ಅನಿಲ್ ಎಚ್.ಟಿ. ನಿರೂಪಿಸಿದರು. ಯುವ ದಸರಾ ಉಪಾಧ್ಯಕ್ಷ ಅಜ್ಜೇಟಿರ ಲೋಕೇಶ್ ಸ್ವಾಗತಿಸಿದರು.