ಮಡಿಕೇರಿ, ಅ. 5: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ತಿಳಿಸಿದ್ದಾರೆ. ಈ ಕುರಿತು ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಮಡಿಕೇರಿ ದಸರಾ ಮಡಿಕೇರಿ ನಗರದಲ್ಲಿ ದಸರಾ ಬಂದೋಬಸ್ತ್ ಕರ್ತವ್ಯಕ್ಕಾಗಿ ಡಿ.ವೈ.ಎಸಿ.್ಪ-3, ಸಿ.ಪಿ.ಐ.-9, ಪಿ.ಎಸ್.ಐ.-13, ಎ.ಎಸ್.ಐ.-66, ಕಾನ್ಸ್‍ಟೇಬಲ್ ಹಾಗೂ ಹೆಡ್‍ಕಾನ್ಸ್‍ಟೇಬಲ್ 415, ಮಹಿಳಾ ಪೇದೆಗಳು-30, ಗೃಹ ರಕ್ಷಕರು-200, ಕೆ.ಎಸ್.ಆರ್.ಪಿ.-3 ತುಕಡಿ, ಡಿ.ಎ.ಆರ್.-13 ತುಕಡಿಗಳನ್ನು ನೇಮಿಸಲಾಗುತ್ತಿದೆ. ಇದಲ್ಲದೆ ವಿಧ್ವಂಸಕ ತಪಾಸಣಾ ತಂಡದಿಂದ ಪರಿಶೀಲನೆ ನಡೆಸಲಾಗುತ್ತದೆ.
ದಸರಾ ದಿನದಂದು ನಗರದ ಹೊರ ವಲಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸುಗಮ ಸಂಚಾರ ಕಾಪಾಡುವ ನಿಟ್ಟಿನಲ್ಲಿ ಗಸ್ತು ಕರ್ತವ್ಯಕ್ಕಾಗಿ 10 ಜೀಪುಗಳಲ್ಲಿ ಮತ್ತು 12 ಮೋಟಾರ್ ಸೈಕಲ್‍ನಲ್ಲಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ.ಸಿಸಿ ಕ್ಯಾಮರಾದ ಹೊರತಾಗಿ ಮಡಿಕೇರಿ ನಗರದಲ್ಲಿ ವೀಡಿಯೋ ಚಿತ್ರೀಕರಣಕ್ಕಾಗಿ ಒಟ್ಟು 17 ವೀಡಿಯೋಗ್ರಾಫರ್‍ಗಳನ್ನು ನೇಮಿಸ ಲಾಗುತ್ತದೆ. ಜನದಟ್ಟಣೆ (ಮೊದಲ ಪುಟದಿಂದ) 7 ರ್ಯಾಂಬೋ ತಂಡವನ್ನು ನೇಮಿಸಲಾಗಿದೆ. ಮಫ್ತಿಯಲ್ಲಿ 7 ತಂಡಗಳು ಕಾರ್ಯನಿರ್ವಹಿಸಲಿವೆ.ಮಡಿಕೇರಿ ನಗರದ ಒಳಭಾಗದ ಒಟ್ಟು 40 ಕಡೆಗಳಲ್ಲಿ ಹಾಗೂ ಕಾರ್ಯಕ್ರಮ ಸ್ಥಳ ಗಾಂಧಿಮೈದಾನದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗುತ್ತದೆ.
ವಾಹನ ನಿಲುಗಡೆ ಸ್ಥಳ
ಸೋಮವಾರಪೇಟೆ, ಮಾದಾಪುರ ಮಾರ್ಗ ಮತ್ತು ಕುಶಾಲನಗರ, ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ದಸರಾ ವೀಕ್ಷಣೆಗೆ ಆಗಮಿಸುವ ಎಲ್ಲಾ ಲಘು ವಾಹನಗಳು ಸಂಪಿಗೆ ಕಟ್ಟೆಯಿಂದ ಗದ್ದಿಗೆ- ಕಾನ್ವೆಂಟ್ ಜಂಕ್ಷನ್- ಮೈತ್ರಿ ಜಂಕ್ಷನ್ ಮಾರ್ಗವಾಗಿ ಎಫ್.ಎಂ.ಸಿ. ಕಾಲೇಜು, ಹೊಸ ಬಸ್ಸು ನಿಲ್ದಾಣ, ಸೆಂಟ್‍ಜೋಸೆಫ್ ಕಾನ್ವೆಂಟ್ ಮೈದಾನಗಳಲ್ಲಿ ನಿಲುಗಡೆಗೊಳಿಸಬೇಕು.
ಸೋಮವಾರಪೇಟೆ, ಮಾದಾಪುರ ಮಾರ್ಗ ಮತ್ತು ಕುಶಾಲನಗರ, ಸುಂಟಿಕೊಪ್ಪÀ ಮಾರ್ಗವಾಗಿ ಆಗಮಿಸುವ ಖಾಸಗಿ ಬಸ್ಸುಗಳು ಕಮಾನ್‍ಗೇಟ್ -ಸುದರ್ಶನ ವೃತ್ತದ ಮಾರ್ಗವಾಗಿ ಆರ್.ಎಂ.ಸಿ.ಯಾರ್ಡ್ ಒಳಗಡೆ ಇರುವ ಮೈದಾನದಲ್ಲಿ ನಿಲ್ಲಬೇಕು.
ಸಿದ್ದಾಪುರ, ಚೆಟ್ಟಳ್ಳಿ, ವೀರಾಜಪೇಟೆ, ಮಂಗಳೂರು ಕಡೆಯಿಂದ ಬರುವ ಎಲ್ಲಾ ಲಘು ವಾಹನಗಳು ಜಿ.ಟಿ. ವೃತ್ತ, ಸುದರ್ಶನ ವೃತ್ತ, ಚೈನ್‍ಗೇಟ್ ಮಾರ್ಗವಾಗಿ, ಗೌಡಸಮಾಜ ರಸ್ತೆಯ ಮೂಲಕ ಮ್ಯಾನ್ಸ್ ಕಾಂಪೌಂಡ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾ ಮೈದಾನದಲ್ಲಿ ವಾಹನವನ್ನು ನಿಲ್ಲಿಸಬೇಕು. ಈ ರಸ್ತೆಯಲ್ಲಿ ಏಕಮುಖ ಸಂಚಾರವಿರುತ್ತದೆ.
ಮ್ಯಾನ್ಸ್ ಕಾಂಪೌಂಡ್ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾ ಮೈದಾನದಲ್ಲಿ ನಿಲುಗಡೆಗೊಳಿಸಿದ ವಾಹನಗಳು ವಾಪಾಸ್ಸು ಮೇಲಿನ ಗೌಡಸಮಾಜ, ರಾಘವೇಂದ್ರ ದೇವಸ್ಥಾನ ಮಾರ್ಗವಾಗಿ ಚೈನ್‍ಗೇಟ್ ಮುಖಾಂತರ ನಿರ್ಗಮಿಸಬೇಕು. ಈ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ.
ದ್ವಿಚಕ್ರ ವಾಹನಗಳ ನಿಲುಗಡೆಗೆÉ ಶಾಂತಿ ಚರ್ಚ್ ಎದುರು ಇರುವ ಸರಕಾರಿ ಶಾಲಾ ಮೈದಾನದಲ್ಲಿ ಅವಕಾಶವಿರುತ್ತದೆ.
ಮಡಿಕೇರಿ ನಗರದ ಒಳಭಾಗದಲ್ಲಿರುವ ಮುಖ್ಯರಸ್ತೆ, ಗಣಪತಿ ಬೀದಿ, ಮಹದೇವಪೇಟೆ, ಕೊಹಿನೂರ್ ರಸ್ತೆ, ಕಾಲೇಜು ರಸ್ತೆ ಕಡೆಗಳಲ್ಲಿ ಪ್ರತಿನಿತ್ಯ ನಿಲುಗಡೆಗೊಳಿಸುವ ವಾಹನಗಳನ್ನು ಮಡಿಕೇರಿ ಕೆÀ್ರಸೆಂಟ್ ಶಾಲೆ, ಹಿಂದೂಸ್ಥಾನಿ ಶಾಲಾ ಮೈದಾನ, ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ ಮತ್ತು ಹೊಸ ಖಾಸಗಿ ಬಸ್ಸು ನಿಲ್ದಾಣದ ಒಳಗಡೆ ನಿಲುಗಡೆಗೊಳಿಸಬೇಕು.
ಮಾರ್ಗ ಬದಲಾವಣೆ
ಮೈಸೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಪಿರಿಯಾಪಟ್ಟಣ- ಮಾಲ್ದಾರೆ- ಸಿದ್ದಾಪುರ- ನೆಲ್ಲಿಹುದಿಕೇರಿ -ಅರೆಕಾಡು -ಮರಗೋಡು- ಹಾಕತ್ತೂರು -ಮೇಕೇರಿ -ತಾಳತ್‍ಮನೆ ಮಾರ್ಗವಾಗಿ ತೆರಳಬೇಕು.
ಸುಂಟಿಕೊಪ್ಪ, ಗದ್ದೆಹಳ್ಳ, ಚೆಟ್ಟಳ್ಳಿ, ಅಭ್ಯತ್ ಮಂಗಲ, ಮರಗೋಡು, ಹಾಕತ್ತೂರು, ಮೇಕೇರಿ ಜಂಕ್ಷನ್, ತಾಳತ್‍ಮನೆ ಜಂಕ್ಷನ್ ಮಾರ್ಗವಾಗಿ ಮಂಗಳೂರಿಗೆ ತೆರಳಬೇಕು.
ವಾಹನ ನಿಲುಗಡೆ ನಿಷೇಧ
ತಾ.8ರಂದು ಮಧ್ಯಾಹ್ನ 2 ಗಂಟೆಯಿಂದ ತಾ.9ರಂದು ಬೆಳಿಗ್ಗೆ 11 ಗಂಟೆಯವರೆಗೆ ಮಡಿಕೇರಿ ನಗರದ ಎಲ್ಲಾ ಬೀದಿಗಳಲ್ಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ನಿಯಂತ್ರಣಕ್ಕಾಗಿ ತಾ. 8ರಂದು ಮಧ್ಯಾಹ್ನ 2 ಗಂಟೆಯಿಂದ ತಾ.9ರ ಬೆಳಿಗ್ಗೆ 11 ಗಂಟೆವರೆಗೆ ಮಡಿಕೇರಿ ನಗರದೊಳಗೆ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು/ ಓಡಾಟವನ್ನು ನಿಷೇಧಿಸಲಾಗಿದೆ.
ಕುಶಾಲನಗರ, ಗುಡ್ಡೆಹೊಸೂರು, ವಾಲ್ನೂರು ತ್ಯಾಗತ್ತೂರು, ಅಭ್ಯತ್ ಮಂಗಲ, ಮರಗೋಡು, ಹಾಕತ್ತೂರು, ಮೇಕೇರಿ ಜಂಕ್ಷನ್, ತಾಳತ್‍ಮನೆ ಜಂಕ್ಷನ್ ಮಾರ್ಗವಾಗಿ ಮಂಗಳೂರಿಗೆ ತೆರಳಬೇಕು.
ಮಂಗಳೂರಿನಿಂದ ಮೈಸೂರಿಗೆ ಮಂಗಳೂರು ರಸ್ತೆಯಿಂದ ತಾಳತ್‍ಮನೆ ಜಂಕ್ಷನ್, ಮೇಕೇರಿ ಜಂಕ್ಷನ್, ಹಾಕತ್ತೂರು, ಮರಗೋಡು, ಅಭ್ಯತ್ ಮಂಗಲ, ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ತೆರಳಬಹುದು.
ಸೋಮವಾರಪೇಟೆಯಿಂದ ಮಂಗಳೂರಿಗೆ ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ, ಗದ್ದೆಹಳ್ಳ, ಚೆಟ್ಟಳ್ಳಿ, ಅಭ್ಯತ್ ಮಂಗಲ, ಮರಗೋಡು, ಹಾಕತ್ತೂರು, ಮೇಕೇರಿ ಜಂಕ್ಷನ್, ತಾಳತ್‍ಮನೆ ಜಂಕ್ಷನ್ ಮಾರ್ಗವಾಗಿ ಮಂಗಳೂರಿಗೆ ತೆರಳಬೇಕು. ಮಂಗಳೂರಿನಿಂದ ಸೋಮವಾರಪೇಟೆಗೆ ತಾಳತ್‍ಮನೆ ಜಂಕ್ಷನ್, ಮೇಕೇರಿ ಜಂಕ್ಷನ್, ಹಾಕತ್ತೂರು, ಮರಗೋಡು, ಅಭ್ಯತ್ ಮಂಗಲ, ಚೆಟ್ಟಳ್ಳಿ, ಗದ್ದೆಹಳ್ಳ, ಸುಂಟಿಕೊಪ್ಪ, ಸೋಮವಾರಪೇಟೆ ಮಾರ್ಗವಾಗಿ ತೆರಳುವದು.
ಗೋಣಿಕೊಪ್ಪ ದಸರಾ
ಗೋಣಿಕೊಪ್ಪ ನಗರದಲ್ಲಿ ದಸರಾ ಬಂದೋಬಸ್ತ್ ಕರ್ತವ್ಯಕ್ಕಾಗಿ ಡಿ.ವೈ.ಎಸ್.ಪಿ-1 ಸಿಪಿಐ-6, ಪಿ.ಎಸ್.ಐ -11, ಎಎಸ್‍ಐ-25, ಕಾನ್ಸ್‍ಟೇಬಲ್ ಹಾಗೂ ಹೆಡ್‍ಕಾನ್ಸ್‍ಟೇಬಲ್-160, ಮಹಿಳಾ ಪೇದೆಗಳು-36, ಗೃಹ ರಕ್ಷಕರು-100, ಕೆ.ಎಸ್.ಆರ್.ಪಿ-2 ತುಕಡಿ, ಡಿ.ಎ.ಆರ್-3 ತುಕಡಿಗಳನ್ನು ನೇಮಿಸಲಾಗುತ್ತಿದೆ. ಇದಲ್ಲದೆ ವಿಧ್ವಂಸಕ ತಪಾಸಣಾ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಗಸ್ತು ಕರ್ತವ್ಯಕ್ಕಾಗಿ 4 ಜೀಪುಗಳಲ್ಲಿ ಮತ್ತು 4 ಮೋಟಾರ್ ಸೈಕಲ್‍ನಲ್ಲಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಸಿಸಿ ಕ್ಯಾಮರದ ಹೊರತಾಗಿ ವೀಡಿಯೋ ಚಿತ್ರೀಕರಣಕ್ಕಾಗಿ ಒಟ್ಟು-15 ವಿಡಿಯೋಗ್ರಾಫರ್‍ಗಳನ್ನು ನೇಮಿಸಲಾಗಿದೆ. ಜನ ದಟ್ಟಣೆ ನಿಯಂತ್ರಣಕ್ಕಾಗಿ 2 ಪಿಕಪ್ ತಂಡÀವನ್ನು ನೇಮಿಸಲಾಗಿದೆ. ಮಫ್ತಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ. 15 ಕಡೆಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ.
ಮಾರ್ಗ ಬದಲಾವಣೆ
ಗೋಣಿಕೊಪ್ಪಲು ನಗರದ ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರಪುರದವರೆಗೆ ಪೊನ್ನಂಪೇಟೆ ರಸ್ತೆ ಜಂಕ್ಷನ್‍ನಿಂದ ಕೆ.ಪಿ.ಟಿ.ಸಿ.ಎಲ್ ಕಚೇರಿಯವರೆಗೆ, ಪಾಲಿಬೆಟ್ಟ ರಸ್ತೆಯಲ್ಲಿ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಸ್ಕೂಲ್ ರಸ್ತೆಯವರೆಗೆ ಮುಖ್ಯ ಬೀದಿಯಲ್ಲಿ ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗುತ್ತಿದೆ.
ಮೈಸೂರಿನಿಂದ ತಿತಿಮತಿ, ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆಗೆ ಬರುವ ವಾಹನಗಳು ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆಗೆ ತೆರಳಬಹುದು. ವೀರಾಜಪೇಟೆಯಿಂದ ಗೋಣಿಕೊಪ್ಪ-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳಿಗೆ ಕೈಕೇರಿ ಗ್ರಾಮದ ಕಳತ್ಮಾಡ್-ಅತ್ತೂರು ಶಾಲೆ ಜಂಕ್ಷನ್- ಪಾಲಿಬೆಟ್ಟದ ಟಾಟಾ ಸ್ಟೋರ್ ಜಂಕ್ಷನ್-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಸಾಗಬಹುದು.
ಕೇರಳದಿಂದ ಪೆರುಂಬಾಡಿ- ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ತೆರಳುವ ವಾಹನಗಳಿಗೆ ಪೆರುಂಬಾಡಿ-ವೀರಾಜಪೇಟೆ- ಸಿದ್ದಾಪುರ- ಪಿರಿಯಾಪಟ್ಟಣ- ಮೈಸೂರು ಕಡೆಗೆ ಬದಲಿ ಮಾರ್ಗವಾಗಿದೆ.
ವೀರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ- ಕಾನೂರು- ಶ್ರೀಮಂಗಲ- ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು ವೀರಾಜಪೇಟೆ- ಹಾತೂರು- ಕುಂದಾ- ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸಬಹುದು.
ಬಾಳೆಲೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆಗೆ ಹೋಗುವ ವಾಹನಗಳು ಬಾಳೆಲೆ- ಪೊನ್ನಂಪೇಟೆ- ಕುಂದಾ- ಹಾತೂರು ಮಾರ್ಗವಾಗಿ ವೀರಾಜಪೇಟೆಗೆ ತೆರಳಬೇಕು.
ಕುಟ್ಟ, ಶ್ರೀಮಂಗಲ, ಕಾನೂರು ಕಡೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆಗೆ ಹೋಗುವ ವಾಹನಗಳು ಪೊನ್ನಂಪೇಟೆ- ಕುಂದಾ- ಹಾತೂರು ಮಾರ್ಗವಾಗಿ ವೀರಾಜಪೇಟೆಗೆ ಸಂಚರಿಸಬೇಕು.
ಮೈಸೂರು- ತಿತಿಮತಿ- ಗೋಣಿಕೊಪ್ಪ- ಶ್ರೀಮಂಗಲ- ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು ತಿತಿಮತಿ-ಕೋಣನಕಟ್ಟೆ- ಪೊನ್ನಪ್ಪಸಂತೆ- ನಲ್ಲೂರು- ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸಬೇಕು.
ಕುಟ್ಟ, ಶ್ರೀಮಂಗಲ, ಪೊನ್ನಂಪೇಟೆ, ಗೋಣಿಕೊಪ್ಪ, ಮೈಸೂರು ಕಡೆಗೆ ಹೋಗುವ ವಾಹನಗಳು, ಕುಟ್ಟ, ಶ್ರೀಮಂಗಲ, ಪೊನ್ನಂಪೇಟೆ, ನಲ್ಲೂರು, ಪೊನ್ನಪ್ಪಸಂತೆ, ಕೋಣನಕಟ್ಟೆ, ತಿತಿಮತಿ ಮಾರ್ಗವಾಗಿ ತೆರಳಬೇಕು.
ವೀರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಬಾಳೆಲೆ ಕಡೆಗೆ ಹೋಗುವ ವಾಹನಗಳಿಗೆ ವೀರಾಜಪೇಟೆ-ಹಾತೂರು -ಕುಂದಾ -ಪೊನ್ನಂಪೇಟೆ ಮಾರ್ಗವಾಗಿ ಸಾಗಬಹುದು.
ವಾಹನ ನಿಲುಗಡೆ
ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳಿಗೆ ಗೋಣಿಕೊಪ್ಪ-ಪೊನ್ನಂಪೇಟೆ ರಸ್ತೆಯಲ್ಲಿರುವ ರುದ್ರಭೂಮಿಯ ಹಿಂದಕ್ಕೆ ಪೊನ್ನಂಪೇಟೆ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಬಹುದು.
ತಿತಿಮತಿ ಮತ್ತು ಬಾಳೆÀಲೆ ಕಡೆಯಿಂದ ಬರುವ ವಾಹನಗಳು ಗೋಣಿಕೊಪ್ಪಲು ಆರ್.ಎಂ.ಸಿ. ಆವರಣದಲ್ಲಿ ವಾಹನಗಳನ್ನು ನಿಲ್ಲಿಸಬಹುದು.
ಪಾಲಿಬೆಟ್ಟ ಕಡೆಯಿಂದ ಬರುವ ವಾಹನಗಳಿಗೆ ಪಾಲಿಬೆಟ್ಟ ರಸ್ತೆಯಲ್ಲಿ ಶಾಸ್ತಾ ಇಂಡಸ್ಟ್ರೀಸ್ ನಿಂದ ಅತ್ತೂರು ಕಡೆಗೆ ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಲಾಗಿದೆ ಎಂದು ಎಸ್ಪಿ ಸುಮನ್ ವಿವರಿಸಿದ್ದಾರೆ.
ಈ ಸಂದರ್ಭ ಡಿವೈಎಸ್ಪಿ ದಿನೇಶ್ ಕುಮಾರ್, ಪೊಲೀಸ್ ನಿರೀಕ್ಷಕರುಗಳಾದ ಅನೂಪ್ ಮಾದಪ್ಪ, ಮೇದಪ್ಪ ಉಪಸ್ಥಿತರಿದ್ದರು.