ಮೂರ್ನಾಡು, ಅ. 4: ಇಲ್ಲಿನ ಪಾಂಡಾಣಿ ಮೈದಾನದಲ್ಲಿ ತಾ. 87 ರಂದು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದಿಂದ 26ನೇ ವರ್ಷದ ಆಯುಧ ಪೂಜೆಯನ್ನು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತದೆ. ಅಪರಾಹ್ನ 2.30 ಗಂಟೆಗೆ ಅಲಂಕೃತ ವಾಹನಗಳ ಪೂಜಾ ಸಮಾರಂಭದಿಂದ ಕಾರ್ಯಕ್ರಮ ಚಾಲನೆಗೊಂಡು, 3 ಗಂಟೆಗೆ ವಾಹನಗಳ ಮೆರವಣಿಗೆ, ಕೇರಳ ತಂಡದ ವಾದ್ಯಗೋಷ್ಠಿಯೊಂದಿಗೆ ನಡೆಯಲಿದೆ.

ಸಂಜೆ 6 ರಿಂದ 7 ಗಂಟೆಯವರೆಗೆ ಮೂರ್ನಾಡು ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ, 7 ರಿಂದ 8 ಗಂಟೆಯವರೆಗೆ ಮುಖ್ಯ ಅತಿಥಿಗಳಿಂದ ಭಾಷಣ ಹಾಗೂ ವಾಹನಗಳಿಗೆ ಬಹುಮಾನ ವಿತರಣೆ, 8.30 ರಿಂದ 10.30ರವರೆಗೆ ಕೂರ್ಗ್ ಮೆಲೋಡಿಯಸ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ರಾತ್ರಿ 10 ರಿಂದ 11 ಗಂಟೆಯವರೆಗೆ ಸ್ಥಳೀಯ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಮಕ್ಕಳ ನೃತ್ಯ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ತಾ. 6ರ ಸಂಜೆ 5 ಗಂಟೆಯೊಳಗೆ ಮೊ. 9535623949 ಅನ್ನು ಸಂಪರ್ಕಿಸಬಹುದಾಗಿದೆ.