ಮಡಿಕೇರಿ, ಅ.4: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾರ್ವಜನಿಕ ನೆರೆ ಸಂತ್ರಸ್ತರ ಪರಿಹಾರ ನಿಧಿ ಸಮಿತಿ ವತಿಯಿಂದ ಪ್ರಕೃತಿ ವಿಕೋಪ ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ. ನೊಂದ ಮಕ್ಕಳ ವಿದ್ಯಾಭ್ಯಾಸದ ಶುಲ್ಕದ ಭಾಗವನ್ನು ಭರಿಸುವ ಸಲುವಾಗಿ ಸಮಿತಿ ಮೂಲಕ ಸಂಗ್ರಹಿಸಲಾದ ರೂ.1.86 ಲಕ್ಷಕ್ಕೆ ಸಂಘದ ವತಿಯಿಂದ ರೂ. 50 ಸಾವಿರ ಮೊತ್ತವನ್ನು ಸೇರಿಸಿ ಒಟ್ಟು ರೂ.2.36 ಲಕ್ಷವನ್ನು ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಶುಲ್ಕಕ್ಕಾಗಿ ಸಂಸ್ಥೆಗೆ ನೀಡಲಾಗಿದೆ.