ಗೋಣಿಕೊಪ್ಪಲು, ಅ. 4: ವಾಣಿಜ್ಯ ನಗರಿಯಲ್ಲಿ ಮಹಿ¼ Éಯರದ್ದೇ ದರ್ಬಾರ್ ಹಾಡಿದರು, ಕುಣಿದು ಕುಪ್ಪಳಿಸಿದರು, ರಂಗೋಲಿ ಬಿಡಿಸಿದರು. ಛದ್ಮವೇಷ ಧರಿಸಿದರು, ಅತಿಥಿಗಳೊಂದಿಗೆ ಸೆಲ್ಫಿ ತೆಗೆದು ತಮ್ಮದೇ ಲೋಕವನ್ನು ಸೃಷ್ಟಿಸಿ ಮೈಮರೆತು ಆನಂದಭರಿತರಾದರು.ಇಲ್ಲಿನ ಶ್ರೀ ಕಲಾವೇದಿಕೆಯಲ್ಲಿ ಶ್ರೀ. ಕಾವೇರಿ ದಸರಾ ಸಮಿತಿ ಮತ್ತು ಮಹಿಳಾ ದಸರಾ ಸಮಿತಿ ವತಿಯಿಂದ ನಡೆದ ಮಹಿಳಾ ದಸರಾ ಆಚರಣೆಯಲ್ಲಿ ಮಹಿಳೆಯರು ತಾ ಮುಂದು, ನೀ ಮುಂದು ಅನ್ನುತ್ತಾ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಅನಿಸಿಕೊಂಡರು. ಹೂ ಕಟ್ಟುವದು, ಮೆಹಂದಿ ಹಾಕುವದು, ಬೆಂಕಿ ಇಲ್ಲದ ಅಡುಗೆ, ಜಾನಪದ ಗೀತೆ ಮತ್ತು ನೃತ್ಯ, ಕಣ್ಣು ಕಟ್ಟಿ ಮೇಕಪ್, ವಾಲಗತ್ತಾಟ್, ಪೌರಾಣಿಕ ಛದ್ಮವೇಷ, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಬಲೂನು ಹೊಡೆಯುವದು, ರಂಗೋಲಿ ಹಾಕುವದು ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗವಹಿಸಿ ನಿತ್ಯ ಪಡುವ ಜಂಜಾಟಗಳಿಂದ ವಿಮುಕ್ತಿ ಪಡೆದು ಉಲ್ಲಾಸಭರಿತರಾದರು. ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಒಕ್ಕೂಟಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು. ಮಹಿಳಾ ದಸರಾ ಸಮಿತಿ ಪದಾಧಿಕಾರಿಗಳು ಕೊಡವ ವಾಲಗಕ್ಕೆ ನೃತ್ಯ ಮಾಡುವ ಮೂಲಕ ಅತಿಥಿಗಳಾದ ಜಿಲ್ಲಾಧಿಕಾರಿ ಮತ್ತು ಪೆÇಲೀಸ್ ವರಿಷ್ಠಾಧಿಕಾರಿ ಅವರನ್ನು ರಂಜಿಸಿ ಕಾರ್ಯಕ್ರಮವನ್ನು ಕಳೆಗಟ್ಟಿಸಿದರು.
ಮಹಿಳೆಯರು ಯಾವದೇ ಕೆಲಸವನ್ನು ಬಹಳ ಜವಾಬ್ದಾರಿ ಯಿಂದ ನಿಭಾಯಿಸುವ ಶಕ್ತಿ ಹೊಂದಿದ್ದಾಳೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು. ಶ್ರೀ. ಕಾವೇರಿ ಕಲಾವೇದಿಕೆಯಲ್ಲಿ ನೂರೇರ ರತಿ ಅಚ್ಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಬ್ಬ ಗೃಹಿಣಿಯೂ ಆದಂತಹ ಮಹಿಳೆ ಮತ್ತು ಉನ್ನತ ಹುದ್ದೆಯಲ್ಲಿರುವ ಮಹಿಳೆಯು ಒಂದೇ ಒತ್ತಡದಲ್ಲಿ ಜವಾಬ್ದಾರಿ ಯನ್ನು ನಿಭಾಯಿಸಬಲ್ಲಳು. ಮನೆಕೆಲಸ ಮಾಡುವದು ಕೂಡ ಒಂದು ದೊಡ್ಡ ಗೌರವದ ಕೆಲಸ ಮನೆಕೆಲಸ ನಿರ್ವಹಿಸುವದು ಅಷ್ಟು ಸುಲಭದ ಕೆಲಸವಲ್ಲ ಎಂದು ಮಹಿಳೆಯರನ್ನು ಸಮರ್ಥಿಸಿ ಕೊಂಡರು. ಮಹಿಳೆಯರು ಯಾವದೇ ಹುದ್ದೆಯನ್ನು ಅಲಂಕರಿಸಿದರೂ ಆ ಹುದ್ದೆಗೆ ಗೌರವ ತಂದು ಕೊಡಬಲ್ಲರು. ಮಹಿಳೆಯರು ಪುರುಷರಿಗಿಂತ ಕಡಿಮೆಯಲ್ಲ.
(ಮೊದಲ ಪುಟದಿಂದ) ಆಕೆ ಆತ್ಮಸ್ಥೈರ್ಯದಿಂದ ಇದ್ದರೆ ಯಾವದೇ ಕಠಿಣ ವ್ಯವಸ್ಥೆಯನ್ನು ಸರಿಪಡಿಸಬಲ್ಲಳು ಎಂದು ಮಹಿಳೆಯರ ಬಲ ಮತ್ತು ಶಕ್ತಿಯ ಬಗ್ಗೆ ಶ್ಲಾಘಿಸಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿ ಕಾರಿ ಡಾ. ಸುಮನ್ ಡಿ. ಪನ್ನೇಕರ್ ಮಾತನಾಡಿ, ಇಡೀ ಸಂಸಾರದ ಜವಾಬ್ದಾರಿಯನ್ನು ನಿಭಾಯಿಸುವಂತೆ ದೇಶವನ್ನು ಆಳುವ ಶಕ್ತಿ ಮಹಿಳೆಯರಲ್ಲಿ ಅಡಗಿದೆ. ಅವಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವಾಗಬೇಕಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದಾಗ ಕೊಡಗಿನ ಮಹಿಳೆಯರ ಪರಿಸ್ಥಿತಿ ಉತ್ತಮವಾಗಿ ಕಂಡುಬರುತ್ತದೆ. ಈ ಜಿಲ್ಲೆಯ ಪುರುಷ ಸಮಾಜ ಮಹಿಳೆಯರಿಗೆ ಸಾತಂತ್ರ್ಯವನ್ನು ನೀಡಿದ್ದಾರೆ. ಹೀಗಾಗಿಯೇ ಮಹಿಳೆಯರು ಶುಭ ಸಮಾರಂಭಗಳಲ್ಲಿ ಕೊಡಗಿನ ವಾಲಗಗಳಿಗೆ ಹೆಜ್ಜೆ ಹಾಕಿ ಕುಣಿಯುವದನ್ನು ಕಾಣಬಹುದು. ಇಂತಹ ಹಬ್ಬದ ವಾತಾವರಣ ಈ ಜಿಲ್ಲೆಯಲ್ಲಿ ಕಾಣುತ್ತಿರುವದು ಮಹಿಳೆಯರಲ್ಲಿ ಧೈರ್ಯವನ್ನು ತುಂಬಬಲ್ಲದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ತಾಲೂಕು ಮಹಿಳಾ ಮತ್ತು ಕಲ್ಯಾಣ ಇಲಾಖಾಧಿಕಾರಿ ಸೀತಾಲಕ್ಷ್ಮಿ, ಬಿಜೆಪಿ ರಾಜ್ಯ ಮಹಿಳಾ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ಕಾರ್ಯಾಧ್ಯಕ್ಷ ಕುಲ್ಲಚಂಡ ಬೋಪಣ್ಣ, ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಮಹಿಳಾ ದಸರಾ ಕಾರ್ಯಾಧ್ಯಕ್ಷೆ ಕೊಣಿಯಂಡ ಬೋಜಮ್ಮ, ಉಪಾಧ್ಯಕ್ಷೆ ರಾಣಿ ನಾರಾಯಣ, ಪ್ರಧಾನ ಕಾರ್ಯದರ್ಶಿ ಮನೆಯಪಂಡ ಶೀಲಾ ಬೋಪಣ್ಣ, ಕಾರ್ಯದರ್ಶಿ ಧನಲಕ್ಷ್ಮಿ, ರೇಖಾ ಶ್ರೀಧರ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಚಿತ್ರ ವರದಿ : ಎನ್.ಎನ್. ದಿನೇಶ್