ಮಡಿಕೇರಿ ಅ. 4: ಕರ್ನಾಟಕ ಸರಕಾರ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ ಮತ್ತು ಮೂರ್ನಾಡಿನ ಅನ್ನಪೂರ್ಣೇಶ್ವರಿ ಯುವತಿ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಅಭಿಯಾನ ಕಾರ್ಯಕ್ರಮ ನಡೆಯಿತು.
ಮೂರ್ನಾಡುವಿನ ಶ್ರೀ ಅನ್ನಪೂಣೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ, ಎಂ. ಬಾಡಗ-1 ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬಿ.ಬಿ. ಜಯಂತಿ, ಪೋಷಣ್ ಮಾಸಾಚರಣೆಯು ಮಾರ್ಚ್ 2018 ರಲ್ಲಿ ರಾಜಸ್ಥಾನದ ಜುನ್ಜುನುದಲ್ಲಿ ಪ್ರಧಾನ ಮಂತ್ರಿ ಅವರು ಅನುಷ್ಠಾನ ಗೊಳಿಸಿದರು ಎಂದು ಮಾಹಿತಿ ನೀಡಿದರು.
ಗರ್ಭಿಣಿಯರು ಪೌಷ್ಟಿಕ ಆಹಾರ, ಚುಚ್ಚು ಮದ್ದುಗಳು, ಹಿತ್ತಲಲ್ಲಿ ಬೆಳೆಸಿರುವ ಸೊಪ್ಪು ತರಕಾರಿಗಳ ಸೇವನೆ ಮಾಡುವಂತೆ ಸಲಹೆ ನೀಡಿದರು. ಅಲ್ಲದೇ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆ, ಮಾತೃತ್ವ, ಮಾತೃವಂದನ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಗರ್ಭಿಣಿ ಮತ್ತು ಬಾಣಂತಿಯರು ಸದುಪಯೋಗ ಪಡಿಸಿಕೊಳ್ಳುವಂತೆ ಸೂಚಿಸಿದರು.
ಮಗುವಿಗೆ ಆರು ತಿಂಗಳು ತುಂಬಿದ ನಂತರ ಅಂಗನವಾಡಿ ಕೇಂದ್ರದಲ್ಲಿ ಅನ್ನಪ್ರಾಶನ ಮಾಡುವಂತೆ ಸಲಹೆ ನೀಡಿದರು ಅವರು, ಗರ್ಭಿಣಿ ಬಾಣಂತಿಯರು ಸಹ ಅಂಗನವಾಡಿ ಕೇಂದ್ರ ಮುಖಾಂತರವೇ ಪಡೆದುಕೊಳ್ಳುವಂತೆ ಮಾಹಿತಿಯನ್ನು ನೀಡಿದರು. ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಸಂಸ್ಥಾಪಕರಾದ ಮಹಾಭಲೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ದೇವಾಲಯ ಸಮಿತಿಯ ಗ್ರೇಸಿ ವಿಜಯ, ಮುರುಳಿ, ಸಪ್ನ ಚಂದ್ರಶೇಖರ್, ಕಾಂಚನ ಭಟ್ ಹಾಜರಿದ್ದರು.