ಸಿದ್ದಾಪುರ, ಅ. 4: ಪ್ರತಿಷ್ಠಿತ ಸ್ಕಾಚ್ ಪ್ರಶಸ್ತಿಯನ್ನು ಗೋಣಿಕೊಪ್ಪಲುವಿನ ಗೀತಾ ಚಂಗಪ್ಪ ಅವರು ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸ್ಕಾಚ್ ಸಂಸ್ಥೆಯ ಅತ್ಯುತ್ತಮ ಸಮಾಜ ಸೇವಕ ವಿಭಾಗದ ಪುರಸ್ಕಾರವನ್ನು ಪಡೆದುಕೊಂಡರು. ಗೀತಾ ಚಂಗಪ್ಪ ಅವರು ಪಾಲಿಬೆಟ್ಟ ಚೈಶೈರ್ ಹೋಂ ಸಂಸ್ಥೆಯ ಅಧ್ಯಕ್ಷರಾಗಿ ಕಳೆದ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ವಿಶೇಷ ಚೇತನರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಇದರೊಂದಿಗೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಜನರಲ್ಲಿ ಅರಿವನ್ನು ಮೂಡಿಸುತ್ತಿದ್ದಾರೆ. ಸ್ಯಾನಿಟರಿ, ಪೇಪರ್ ಬ್ಯಾಗ್ಗಳ ಘಟಕವನ್ನು ಹೊಂದಿದ್ದು, ಹಿರಿಯ ನಾಗರಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಸಂಸ್ಥೆಯಾಗಿರುವ ಸ್ಕಾಚ್ ಪುರಸ್ಕಾರವನ್ನು ನೀಡಿ ಗೌರವಿಸಿದೆ.