ಬೆಂಗಳೂರು, ಅ. 4 : ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ಕೋರಿ ಪ್ರಸ್ತಾವನೆ ಸಲ್ಲಿಸಿ ಕೇಂದ್ರವು ವಿಳಂಬ ಮಾಡುತ್ತಿದ್ದ ಬಗ್ಗೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಉಂಟಾಗಿತ್ತು. ವಿರೋಧ ಪಕ್ಷಗಳು, ಸಂತ್ರಸ್ತರು, ರೈತರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರಾಜ್ಯ ಬಿಜೆಪಿಯ ಕೆಲವು ಪ್ರಮುಖರೇ ಕೇಂದ್ರದ ಈ ದೋರಣೆ ಬಗ್ಗೆ ಅಸಮಾಧಾನಗೊಂಡಿದ್ದುದು ಬಹಿರಂಗವಾಗಿತ್ತು. ಇಂದು ಕೇಂದ್ರ ಸರಕಾರವು ನೆರೆ ಹಾವಳಿ ಪರಿಹಾರರ್ಥವಾಗಿ ಮಧ್ಯಂತರ ಮೊತ್ತವಾಗಿ ರೂ. 1,200 ಕೋಟಿ ಹಣವನ್ನು ಬಿಡುಗಡೆ ಮಾಡಿದೆ.