ಮಡಿಕೇರಿ, ಅ. 2: ವಿಭಾಗೀಯ ಮಟ್ಟದ ದಸರಾ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಸಾಯಿಶಂಕರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು 1 ಚಿನ್ನದ ಪದಕ, 2 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕಗಳನ್ನು ಗಳಿಸಿ ರಾಜ್ಯಮಟ್ಟದ ದಸರಾ ಬಾಕ್ಸಿಂಗ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಗೌರವಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೂರ್ಗ್ ವೆಲ್‍ನೆಸ್ ಫೌಂಡೇಶನ್‍ನ ಸ್ಥಾಪಕಿ ನಿಕ್ಕಿ ಪೊನ್ನಪ್ಪ, ಚೋಂದಮ್ಮ ಹಾಗೂ ಕೊಡಗು ಬಾಕ್ಸಿಂಗ್ ಅಸೋಸಿಯೇಷನ್‍ನ ಸ್ಥಾಪಕ ಕರ್ನಲ್ ಮುತ್ತಣ್ಣ, ಬಾಕ್ಸಿಂಗ್ ಕೋಚ್ ಶರತ್, ರೂಪೇಶ್ ಹಾಗೂ ಶಮ, ಪ್ರಾಂಶುಪಾಲೆ ದಶಮಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಕಾವೇರಮ್ಮ ಉಪಸ್ಥಿತರಿದ್ದರು. 10ನೇ ತರಗತಿ ವಿದ್ಯಾರ್ಥಿನಿ ಮಾನ್ಯ ಮುತ್ತಮ್ಮ ಸ್ವಾಗತಿಸಿ, ಕಾಲೇಜು ವಿಭಾಗದ ಬೋಧಕಿ ಪೃಥ್ವಿ ವಂದಿಸಿದರು.