ಮಡಿಕೇರಿ, ಅ. 2: ವೀರಾಜಪೇಟೆ ಸಮೀಪದ ಅಂಬಟ್ಟಿ ಗ್ರಾಮದ ರಸ್ತೆ ತಿರುವಿನಲ್ಲಿ ಕಾರೊಂದು (ಕೆ.ಎ. 12 ಎಂ.ಎ. 6684) ಚಾಲನೆ ವೇಳೆ ಹತೋಟಿ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಈ ಕಾರನ್ನು ಚಾಲಿಸುತ್ತಿದ್ದ ವಾಟೇರಿಯ ಶ್ಯಾಮ್ ಎಂಬವರ ಪತ್ನಿ ಕೌಶಿ ಹಾಗೂ ಮಗ ಸೋಮಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಬ್ಬರು ಸಣ್ಣಪುಟ್ಟ ಗಾಯಗೊಂಡಿದ್ದು; ಈ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ವೇಳೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು; ಕ್ರೇನ್ ಮೂಲಕ ಪ್ರಪಾತದಿಂದ ತೆಗೆಯಲಾಗಿದೆ.