ಮಡಿಕೇರಿ, ಅ. 2: ನಾಪೋಕ್ಲು ಬಳಿಯ ಚೆರಿಯ ಪರಂಬು ನಿವಾಸಿ ಎಂ.ಎಂ. ಉಮ್ಮರ್ (72) ಎಂಬವರು ಸೆ. 29 ರಿಂದ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಸಖತ್ ನಾಪೋಕ್ಲು ಠಾಣೆಗೆ ದೂರು ನೀಡಿದ್ದಾರೆ. ಈ ವ್ಯಕ್ತಿಯ ಸುಳಿವು ದೊರೆತಲ್ಲಿ ನಾಪೋಕ್ಲು ಠಾಣೆಯ ದೂರವಾಣಿ 08272-237240ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.