*ಸಿದ್ದಾಪುರ, ಅ. 2: ವಿಶೇಷಚೇತನರಿಗೆ 10 ದಿನಗಳ ವೃತ್ತಿಪರ ತರಬೇತಿ ಕಾರ್ಯಾಗಾರವನ್ನು ಕೂಡಿಗೆ ಕಾರ್ಪೋರೇಶನ್ ಬ್ಯಾಂಕ್ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ವಿಶೇಷಚೇತನರ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಅಧಿಕಾರಿ ಸಂಪತ್ಕುಮಾರ್ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಕಾರ್ಪೋರೇಷನ್ ಬ್ಯಾಂಕ್ನ ನಿರ್ದೇಶಕ ಡಾ. ಸುಖೇಶ್ ಮಾತನಾಡಿದರು. ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಯೋಜನಾ ನಿರ್ದೇಶಕ ಜಯಕುಮಾರ್ ವಹಿಸಿ ಮಾತನಾಡಿದರು. ಪೇಪರ್ ಬ್ಯಾಗ್ ತಯಾರಿಕೆ, ಪಿನಾಯಿಲ್ ತಯಾರಿಕೆ, ಬೆನಿಕ್ ನರ್ಸರಿ ತರಬೇತಿಯನ್ನು ನಡೆಸಲಾಯಿತು. ಕಾರ್ಪೋರೇಷನ್ ಬ್ಯಾಂಕ್ ಸಿಬ್ಬಂದಿಗಳು, ಸ್ವಾಮಿ ವಿವೇಕಾನಂದ ಮೂವ್ಮೆಂಟ್ನ ಸಿಬ್ಬಂದಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಿದರು.