ಗೋಣಿಕೊಪ್ಪಲು, ಅ. 2: ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಕಳೆದ 36 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ‘ಸ್ಪಿರಿಟ್ ಆಫ್ ಫ್ರೀಡಂ ರನ್’ ಕಾರ್ಯಕ್ರಮವು ಈ ಬಾರಿ ಯಶಸ್ವಿಯಾಗಿ ಜರುಗಿತು. ಗಾಂಧಿ ಜಯಂತಿಯ ದಿನದಂದು ಮುಂಜಾನೆ 7 ಗಂಟೆಗೆ ಪೊನ್ನಂಪೇಟೆಯ ಬಸ್ ನಿಲ್ದಾಣದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ದಿವಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾನ್ನೂರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. 5 ವಿಭಾಗದಲ್ಲಿ ನಡೆದ ಓಟದಲ್ಲಿ 6 ವಯಸ್ಸಿನಿಂದ 70 ವಯಸ್ಸಿನ ವರೆಗಿನ ಜನತೆ ಪಾಲ್ಗೊಂಡಿದ್ದರು.
ಪೊನ್ನಂಪೇಟೆಯಿಂದ ಗೋಣಿಕೊಪ್ಪಲುವಿನ ಉಮಾ ಮಹೇಶ್ವರಿ ಪೆಟ್ರೋಲ್ ಬಂಕ್ನವರೆಗೆ ಓಟದ ಕಾರ್ಯಕ್ರಮ ನಡೆಯಿತು. ಮುಂಜಾನೆ ಪೆಟ್ರೋಲ್ ಬಂಕ್ನ ಆವರಣದಲ್ಲಿ ಆಯೋಜನೆ ಗೊಂಡಿದ್ದ ಬಹುಮಾನ ವಿತರಣಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ನ ಅಧ್ಯಕ್ಷ ಕಳ್ಳಂಗಡ ನಿತಿ ಪೂಣಚ್ಚ ಅನೇಕ ವರ್ಷಗಳಿಂದ ಈ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದೆ. ವರ್ಷದಿಂದ ವರ್ಷಕ್ಕೆ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದ ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ಓಟದ ಸ್ಪರ್ಧೆಯಿಂದ ದೈಹಿಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳು ಇದನ್ನು ರೂಢಿಸಿಕೊಳ್ಳ ಬೇಕು ಎಂದರು. ಕಿರಿಯರ ವಿಭಾಗದಲ್ಲಿ 6ರ ಪ್ರಾಯದ ಕಾಪ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕಲ್ಯಾಟಂಡ ವನ್ಸಿಕ 45 ನಿಮಿಷಗಳಲ್ಲಿ 6 ಕಿ.ಮೀ.ಗಳನ್ನು ಓಡುವ ಮೂಲಕ ಮೊದಲ ಬಹುಮಾನಕ್ಕೆ ಭಾಜನರಾದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಅಮ್ಮಂಡ ಚಿಣ್ಣಪ್ಪ, ಖಜಾಂಜಿ ಅಲ್ಲುಮಾಡ ಸುನೀಲ್, ಲಯನ್ ಮನ್ನಕ್ಕಮನೆ ಬಾಲಕೃಷ್ಣ, ಲವ ಗಣಪತಿ, ಕರ್ನಲ್ ಮುತ್ತಣ್ಣ, ಕೆ.ಎಸ್. ಅಯ್ಯಪ್ಪ, ಸ್ಮರಣ್ ಸುಭಾಷ್, ಚೇತನ್, ಜೆ.ಎಸ್. ಮಾದಪ್ಪ, ಪಟ್ಟಡ ಧನು ಉತ್ತಯ್ಯ, ಬೋಸ್ ಪೆಮ್ಮಯ್ಯ, ಅಜಿತ್ ಅಯ್ಯಪ್ಪ, ಲಯನ್ಸ್ ಕ್ಲಬ್ ಟ್ರಸ್ಟ್ನ ಅಧ್ಯಕ್ಷ ಕೆ.ಎಸ್. ಚಂಗಪ್ಪ, ಬುಟ್ಟಿಯಂಡ ಚಂಗಪ್ಪ, ಜಮ್ಮಡ ಮೋಹನ್, ಉಪಸ್ಥಿತರಿದ್ದರು. ಉಮಾಮಹೇಶ್ವರಿ ಪೆಟ್ರೋಲ್ ಬಂಕ್ನ ಮಾಲೀಕ ಕೊಲ್ಲೀರ ಗಯಾ ಕಾವೇರಪ್ಪ ಲೆನ್ ಮತ್ತು ಮೀ ಕಾರ್ಯಕ್ರಮದ ಪ್ರಾಯೋಜಕರಾಗಿ ಭಾಗವಹಿಸಿದ್ದರು. ದೈಹಿಕ ಶಿಕ್ಷಕ ನಾಗೇಶ್, ಗ್ಯಾನ್ ಸೋಮಣ್ಣ, ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಕಾಪ್ಸ್, ಕಾಲ್ಸ್, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಪೊನ್ನಂಪೇಟೆ ಪಬ್ಲಿಕ್ ಸ್ಕೂಲ್, ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಿರಿಯ ವಿಭಾಗದಲ್ಲಿ ರಜನ್ ಪಿ.ಎಲ್. (ಪ್ರ), ವಿಶಾಲ್ ಉತ್ತಪ್ಪ (ದ್ವಿ), ಧನುಷ್ ಸಿ.ಡಿ. (ತೃ), ಬಾಲಕಿಯರ ವಿಭಾಗದಲ್ಲಿ ಕಲ್ಯಾಟಂಡ ವನ್ಸಿಕಾ, ಲೋಚನ್ ಸೂರನ್, ಹಿಮಾನಿ ಸೀತಮ್ಮ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ್ ಅಚ್ಚಯ್ಯ (ಪ್ರ), ರುತ್ವಿಕ್ ಎಸ್.ಆರ್. (ದ್ವಿ), ತನುಷ್ ತಿಮ್ಮಯ್ಯ (ತೃ) ಬಾಲಕಿಯರ ವಿಭಾಗದಲ್ಲಿ ಗಂಗಮ್ಮ ಎಂ.ಆರ್. (ಪ್ರ) ಆಶಾ ಕೆ.ಎನ್. (ದ್ವಿ) ಮುತ್ತಣ್ಣ ಹೆಚ್.ಆರ್. (ತೃ) ಪ್ರೌಢ ಶಾಲೆ ವಿಭಾಗದಲ್ಲಿ ಅದಿತ್ ಕುಶಾಲ್ (ಪ್ರ), ನಿಕ್ಷಿತ ಆರ್.ಎಂ. (ದ್ವಿ), ನಾಚಪ್ಪ.ಸಿ.ಎಂ. (ತೃ) ಬಾಲಕಿಯರ ವಿಭಾಗದಲ್ಲಿ ದಿಶಾ ಪೊನ್ನಮ್ಮ ಎಂ.ಯು. (ಪ್ರ), ಕೀರ್ತನಾ ಬಿ.ಎಂ. (ದ್ವಿ), ದಿಲ್ಮ ತಂಗಮ್ಮ ಕೆ.ಜಿ.(ತೃ) ಸಾರ್ವಜನಿಕ ವಿಭಾಗದಲ್ಲಿ ಜಿತಿನ್ ಜೆ.ಕೆ. (ಪ್ರ), ಆದಿತ್ಯ (ದ್ವಿ), ಕಾರ್ಯಪ್ಪ ಎಂ.ಡಿ. (ತೃ). ಮಹಿಳೆಯರ ವಿಭಾಗದಲ್ಲಿ ನಿಸರ್ಗ ಎಸ್.ಪಿ. (ಪ್ರ) ಜ್ಯೋತಿಕ (ದ್ವಿ), ತುಷರಾ (ತೃ). ಮಹಿಳೆಯರ ಹಿರಿಯರ ವಿಭಾಗದಲ್ಲಿ ರಶ್ಮಿ ಅಯ್ಯಪ್ಪ ಸಾಧನೆ ಮಾಡಿ ಬಹುಮಾನ ಪಡೆದರು.
ಚಿತ್ರ, ವರದಿ: ಹೆಚ್.ಕೆ. ಜಗದೀಶ್