ಮಡಿಕೇರಿ, ಅ. 2: ಅಹಿಂಸಾ ವಾದಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನೋತ್ಸವ ಅಂಗವಾಗಿ; ಇಂದು ನಾಡಿನೆಲ್ಲೆಡೆ ಗೌರವ ನಮನ ಸಲ್ಲಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾಡಳಿತ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ; ಅತಿಥಿ ಗಣ್ಯರು ಮಹಾತ್ಮ ಗಾಂಧೀಜಿ, ದಿ. ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳಿಗೆ ಗೌರವ ನಮನ ಸಲ್ಲಿಸಿದರು.ಅಲ್ಲದೆ ಗಾಂಧಿ ಮಂಟಪದಲ್ಲಿ ಸರ್ವೋದಯ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ (ಮೊದಲ ಪುಟದಿಂದ) ಕಾರ್ಯಕ್ರಮ ದಲ್ಲಿಯೂ, ಗಾಂಧೀಜಿ ಅವರ ಪುತ್ಥಳಿಗೆ ಪುಷ್ಪಮಾಲಿಕೆ ಧರಿಸಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ನಮಿಸಲಾಯಿತು. ಇನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೂಡ ಗಾಂಧಿ ಮಂಟಪದಲ್ಲಿ ಮಹಾತ್ಮನ ಪ್ರತಿಮೆಗೆ ಗೌರವಾರ್ಪಣೆ ಮುಖಾಂತರ ನಮನ ಅರ್ಪಿಸಲಾಯಿತು.

ಗಾಂಧೀಜಿ ಹಾಗೂ ಶಾಸ್ತ್ರೀಜಿ ಜನ್ಮದಿನೋತ್ಸವ ಸಲುವಾಗಿ; ಜಿಲ್ಲೆಯ ಇತರೆಡೆಗಳಲ್ಲಿ ಕೂಡ ವಿವಿಧ ಸಂಘ ಸಂಸ್ಥೆಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವ ಜನಿಕರು; ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರುಗಳ ಸಂಸ್ಮರಣೆಗೈದರು.ಸರ್ವೋದಯ ಸಮಿತಿ : ಸರ್ವೋದಯ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಟಿ.ಪಿ. ರಮೇಶ್, ಸಂಸ್ಥಾಪಕ ಸುಬ್ರಮಣಿ, ಪ್ರಮುಖರಾದ ಬಿ.ಎ. ರಾಮಯ್ಯ, ಮುನೀರ್ ಅಹ್ಮದ್, ಲಿಯಾಕತ್ ಆಲಿ, ವಾಸು, ಕೋಡಿಚಂದ್ರಶೇಖರ್, ಗಣೇಶ್, ಚುಮ್ಮಿ ದೇವಯ್ಯ, ಬೇಬಿ ಮ್ಯಾಥ್ಯೂ, ಸುರಯ್ಯ ಅಬ್ರಾರ್, ಅಬ್ದುಲ್ ರಜಾಕ್, ಸಂಪತ್‍ಕುಮಾರ್, ಅಂಬೆಕಲ್ ಕುಶಾಲಪ್ಪ ಸೇರಿದಂತೆ ವಿವಿಧ ಶಾಲಾ - ಕಾಲೇಜು ಮಕ್ಕಳು, ಅಧಿಕಾರಿಗಳು ಸೇವಾದಳ, ಎನ್‍ಎಸ್‍ಎಸ್ ತಂಡ ಭಾಗವಹಿಸಿತ್ತು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಗಾಂಧೀಜಿ ಹಾಗೂ ಶಾಸ್ತ್ರೀಜಿ ಸಂಸ್ಮರಣೆ ನಡೆಯಿತು.ಕಾಂಗ್ರೆಸ್ ನೇತೃತ್ವ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್P Àುಮಾರ್ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡು ರಾಷ್ಟ್ರಪಿತನೊಂದಿಗೆ, ಶಾಸ್ತ್ರೀಜಿ ಅವರನ್ನು ನಮಿಸಿದರು.

ಕಲಾಕ್ಷೇತ್ರ : ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ. ಲಿಯಾಕತ್ ಆಲಿ ವೈಷ್ಣವಜಯತೊ ಪಠಿಸಿದರು. ಮಡಿಕೇರಿ ವಿಧಾನ ಸಭಾಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಧ್ಯಕ್ಷತೆ ಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಪ್ರಮುಖರಾದ ಟಿ.ಪಿ. ರಮೇಶ್ ಮೊದಲಾದವರು ಪುಷ್ಪಾಂಜಲಿಯೊಂದಿಗೆ ನುಡಿನಮನ ಗೈದರು. ಮುನೀರ್ ಅಹ್ಮದ್ ನಿರೂಪಿಸಿ, ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿ ನಿಧಿಗಳ ಸಹಿತ ಸಾರ್ವಜನಿಕರು, ಶಾಲಾ - ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಗರಸಭಾ ಸಿಬ್ಬಂದಿ : ಮಡಿಕೇರಿ ನಗರಸಭಾ ಸಿಬ್ಬಂದಿ, ಅಧಿಕಾರಿಗಳ ನೇತೃತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತೆ, ಪ್ಲಾಸ್ಟಿಕ್ ನಿರ್ಮೂಲನೆ ಸಂದೇಶ ಹೊತ್ತ ಭಿತ್ತಿಪತ್ರ ಪ್ರದರ್ಶಿಸಿ ಗಮನ ಸೆಳೆದರು.