ಕರಿಕೆ, ಅ. 2: ಇಲ್ಲಿನ ಕರಿಕೆ ಕಾಲೋನಿ ಸ.ಹಿ.ಪ್ರಾ. ಶಾಲೆ ಹಾಗೂ ಗಿರಿಜನರ ಆಶ್ರಮ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಪ್ರಯಕ್ತ ಜಂತುಹುಳು ಗುಳಿಗೆ ನೀಡಲಾಯಿತು.

ಜಂತುಹುಳುವಿನ ಬಗ್ಗೆ ಮುಖ್ಯ ಶಿಕ್ಷಕ ಕುಮಾರ್ ಎನ್.ಎಸ್. ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಬರಮಪ್ಪ ಪಾಷಗಾರ್, ಶಿಕ್ಷಕರುಗಳಾದ ಗಣೇಶಾಚಾರಿ, ಮಹಾಲಕ್ಷ್ಮಿ, ಮಧುರ, ಕಾವ್ಯ ಉಪಸ್ಥಿತರಿದ್ದರು.