ಸೋಮವಾರಪೇಟೆ, ಅ. 2: ಒಂದು ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು.

ಕೊಡಗು ಪ್ಯಾಕೆಜ್ ಯೋಜನೆಯಡಿ ಸೋಮವಾರಪೇಟೆ ಕುಶಾಲನಗರ ಹೆದ್ದಾರಿಯಿಂದ ಕಾರೆಕೊಪ್ಪ, ಬಸವನಹಳ್ಳಿ ಮೂಲಕ ಸೋಮವಾರಪೇಟೆ ಸಂಪರ್ಕಿಸುವ ರಸ್ತೆಗೆ 1.5 ಕಿ.ಮೀ ಡಾಂಬರೀಕರಣ ಹಾಗೂ 300 ಮೀ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

ಈ ಸಂದÀರ್ಭ ಗ್ರಾಮಸ್ಥರುಗಳಾದ ಕೆ.ಜಿ. ಸುರೇಶ್, ಹುಲ್ಲೂರಿಕೊಪ್ಪ ಚಂದ್ರು, ಹರೀಶ್, ಚಂದ್ರ, ರಾಜು, ಶ್ಯಾಮ್ ಮತ್ತಿತರರು ಉಪಸ್ಥಿತರಿದ್ದರು.