ಮಡಿಕೇರಿ, ಅ. 2: ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ಕರಗ ಮೆರವಣಿಗೆಯು; ತಾ. 3 ರಂದು (ಇಂದು) ವಿವಿಧೆಡೆ ಸಂಚರಿಸಲಿವೆ. ಕುಂದುರುಮೊಟ್ಟೆ ಕರಗವು ಎಸ್ಪಿ ಬಂಗಲೆ, ಇಂಡೇನ್ ಗ್ಯಾಸ್ ಬಡಾವಣೆ, ಕೊಹಿನೂರು ರಸ್ತೆ, ಪೆನ್ಸನ್ಲೇನ್, ಕೋಟೆ ಮಾರಿಯಮ್ಮ ದೇಗುಲ ಬಡಾವಣೆ, ಅಪ್ಪಚ್ಚಕವಿ ರಸ್ತೆ, ದಂಡಿನ ಮಾರಿಯಮ್ಮ ದೇಗುಲ ವ್ಯಾಪ್ತಿ, ಗೌಳಿಬೀದಿ ಸಂಚರಿಸಲಿದೆ.
ಕೋಟೆ ಮಾರಿಯಮ್ಮ ಕರಗವು ಕೆಳಗಿನ ಪವರ್ ಹೌಸ್, ಗೌಳಿಬೀದಿ, ಮುನೇಶ್ವರ ದೇಗುಲ, ಚೌಟಿಮಾರಿಯಮ್ಮ ದೇಗುಲ ವ್ಯಾಪ್ತಿ, ಸ್ಟಿವರ್ಟ್ ಹಿಲ್, ವಿನ್ಸೆಂಟ್ ಕಾಂಪೌಂಡ್, ಗೌಳಿ ಬೀದಿ, ಕಂಚಿಕಾಮಾಕ್ಷಿ ವ್ಯಾಪ್ತಿ ಸಂಚರಿಸಲಿದೆ. ಕಂಚಿಕಾಮಾಕ್ಷಿ ಕರಗವು ಸ್ಟಿವರ್ಟ್ ಹಿಲ್, ವಿನ್ಸೆಂಟ್ ಕಾಂಪೌಂಡ್ , ರೇಸ್ ಕೋರ್ಸ್ ರಸ್ತೆ, ಗೌಳಿಬೀದಿಯಲ್ಲಿ ತೆರಳಲಿದೆ.
ದಂಡಿನ ಮಾರಿಯಮ್ಮ ಕರಗವು ಸ್ಟಿವರ್ಟ್ ಹಿಲ್, ವಿನ್ಸೆಂಟ್ ಕಾಂಪೌಂಡ್, ಹಳೇ ಇಂಡೇನ್ ಗ್ಯಾಸ್ ವಠಾರ, ಗೌಳಿಬೀದಿ, ಕಂಚಿಕಾಮಾಕ್ಷಿ ದೇಗುಲ ವ್ಯಾಪ್ತಿ ಸಂಚರಿಸಲಿದೆ.