ಅಂತರರಾಷ್ಟ್ರೀಯ ಫುಟ್ಬಾಲ್ಪಟು ಇಯಾನ್ ಸೆಲ್ಲಿ ಮಾರ್ಗದರ್ಶನ
ಮಡಿಕೇರಿ, ಅ. 2: ಕೊಡಗಿನ ಯುವ ಫÀÅಟ್ಬಾಲ್ ಪ್ರತಿಭೆಗಳಿಗೆ ಕ್ರೀಡೆಯ ಸೂಕ್ಷ್ಮ ವಿಚಾರಗಳ ಬಗ್ಗೆ ಅರಿವು ಮೂಡಿಸಿ, ಅವರಿಗೆ ಕ್ರೀಡೆಯ ವಿವಿಧ ಮಜಲುಗಳನ್ನು ಪರಿಚಯಿಸುವ ಪ್ರಯತ್ನವಾಗಿ ಗುಡ್ಡೆಹೊಸೂರಿನ ಐಎನ್ಎಸ್ ಸ್ಪೋಟ್ರ್ಸ್ ಸೆಂಟರ್ನಲ್ಲಿ ತಾ. 5 ರಿಂದ 10 ರವರೆಗೆ ‘ಲೆಟ್ಸ್ ಫÀÅಟ್ಬಾಲ್ ವಿತ್ ಇಯಾನ್ ಸೆಲ್ಲಿ’ ಎನ್ನುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸುಬ್ಬಯ್ಯಾಸ್ ಸೆಂಟರ್ ಫಾರ್ ಹ್ಯೂಮಾನಿಟಿ ಅಂಡ್ ಎಕ್ಸಲೆನ್ಸಿ ಟ್ರಸ್ಟ್ನ ಟ್ರಸ್ಟಿಗಳಾದ ಐಚೆಟ್ಟೀರ ರವಿ ಸೋಮಯ್ಯ, ಲಾಜಿಕಲ್ ಸ್ಪೋಟ್ರ್ಸ್ ಮ್ಯಾನೇಜ್ಮೆಂಟ್ ಮತ್ತು ಕೊಡಗು ಜಿಲ್ಲಾ ಫÀÅಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯುವ ಈ ಫುಟ್ಬಾಲ್ ತರಬೇತಿಯಲ್ಲಿ 10 ರಿಂದ 14 ವರ್ಷ ವಯೋಮಿತಿಯೊಳಗಿನ 40 ಫÀÅಟ್ಬಾಲ್ ಪ್ರತಿಭೆಗಳಿಗೆ ಉಚಿತ ಫÀÅಟ್ಬಾಲ್ ತರಬೇತಿಯನ್ನು ನೀಡಲಾಗುತ್ತದೆ. ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಐಎನ್ಎಸ್ ಸ್ಪೋಟ್ರ್ಸ್ ಸೆಂಟರ್ ವಸತಿ ವ್ಯವಸ್ಥೆಯನ್ನು ಕಲ್ಪಿಸಲಿದೆಯೆಂದು ತಿಳಿಸಿದರು.
ಯುರೋಪಿಯನ್ ಪ್ರತಿಷ್ಠಿತ ಫÀÅಟ್ಬಾಲ್ ಕ್ಲಬ್ಗಳಲ್ಲಿ ಒಂದಾದ ಆರ್ಸೆನೆಲ್ ಕ್ಲಬ್ನ ಮಾಜಿ ಮಿಡ್ ಫೀಲ್ಡರ್ ಇಯಾನ್ ಸೆಲ್ಲಿ ಅವರು ಯುವ ಕ್ರೀಡಾ ಪಟುಗಳಿಗೆ ಫÀÅಟ್ಬಾಲ್ ತರಬೇತಿಯನ್ನು ಹಾಗೂ ಕ್ರೀಡೆಯ ಸೂಕ್ಷ್ಮ ವಿಚಾರಗಳ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ.
ಇಯಾನ್ ಸೆಲ್ಲಿ 1994 ರ ಯುರೋಪಿಯನ್ ಕಪ್ ವಿಜೇತ ಆರ್ಸೆನಲ್ ತಂಡದಲ್ಲಿ ಯುವ ಆಟಗಾರರಾಗಿ ಪಾಲ್ಗೊಂಡು ಗಮನ ಸೆಳೆÉದವರಾಗಿದ್ದು, ಇವರು ಪ್ರಸ್ತುತ ದುಬೈನ್ ಆರ್ಸೆನೆಲ್ ಸಾಕರ್ ಸ್ಕೂಲ್ನ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ವಿವರಗಳನ್ನಿತ್ತರು.
ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಫÀÅಟ್ಬಾಲರ್ ಇಯಾನ್ ಸೆಲ್ಲಿ ಅವರ ಮಾರ್ಗದರ್ಶನದ ಈ ತರಬೇತಿಗೆ ಜಿಲ್ಲೆಯ ಫÀÅಟ್ಬಾಲ್ ಕ್ಲಬ್ಗಳು, ಶಾಲೆಗಳು ತಮ್ಮಲ್ಲಿನ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳನ್ನು ಕಳುಹಿಸಿ ಕೊಡುವಂತೆ ಕೋರಿದ ರವಿ ಸೋಮಯ್ಯ ಅವರು, ತರಬೇತಿಯಲ್ಲಿ ಪಾಲ್ಗೊಳ್ಳುವ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ. 9900785141 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಐಎನ್ಎಸ್ ಸ್ಪೋಟ್ರ್ಸ್ ಸೆಂಟರ್ ಕಳೆದ ಮೂರು ವರ್ಷಗಳಿಂದ ಯುವ ಸಮೂಹದಲ್ಲಿ ಕ್ರೀಡಾ ಆಸಕ್ತಿಯನ್ನು ಬೆಳೆಸುವ ಮೂಲಕ ಶಕ್ತಿ ಶಾಲಿ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸುತ್ತಿದೆ.
ಈ ಕ್ರೀಡಾ ಕೇಂದ್ರದಲ್ಲಿ ಫÀÅಟ್ಬಾಲ್ನೊಂದಿಗೆ ಕ್ರಿಕೆಟ್, ಷಟಲ್ ಮತ್ತು ಮಾರ್ಷಲ್ ಆಟ್ರ್ಸ್ ವಿಭಾಗವನ್ನೂ ತೆರೆಯಲಾಗಿದ್ದು, ಯುವ ಕ್ರಿಡಾಪ್ರತಿಭೆÉಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಕ್ರೀಡಾ ಸೌಲಭ್ಯವನ್ನು ಒದಗಿಸಿ, ಅಗತ್ಯ ತರಬೇತಿಗಳನ್ನು ಒದಗಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಸುಬ್ಬಯ್ಯಾಸ್ ಸೆಂಟರ್ ಫಾರ್ ಹ್ಯೂಮಾನಿಟಿ ಅಂಡ್ ಎಕ್ಸಲೆನ್ಸಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಐಚೆಟ್ಟೀರ ಎಸ್. ಪೆÀÇನ್ನಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿವೆ. ಆದರೆ, ಅಂತಹ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಮುಂದೆ ಸಾಗಬೇಕಾದ ಹಾದಿಯ ಬಗ್ಗೆ ಮಾರ್ಗದರ್ಶನದ ಕೊರತೆ ಇದೆ. ಇದನ್ನು ತುಂಬುವ ಪ್ರಯತ್ನವನ್ನು ಐಎನ್ಎಸ್ ಸ್ಪೋಟ್ರ್ಸ್ ಸೆಂಟರ್ ಮಾಡಿಕೊಂಡು ಬರುತ್ತಿದೆ. ಇದೀಗ ಇಯಾನ್ ಸೆಲ್ಲಿ ಅವರು ನಡೆಸಿಕೊಡುವ ಫÀÅಟ್ಬಾಲ್ ತರಬೇತಿಯ ಸಂಪುರ್ಣ ಪ್ರಯೋಜನವನ್ನು ಜಿಲ್ಲೆಯ ಯುವ ಕ್ರೀಡಾ ಪ್ರತಿಭೆಗಳು ಪಡೆದುಕೊಳ್ಳುವಂತಾಗಬೇಕು ಮತ್ತು ಸ್ಥಳೀಯ ಕ್ಲಬ್ಗಳು ಅಂತರಾಷ್ಟ್ರೀಯ ಖ್ಯಾತಿಯ ಫುಟ್ಬಾಲ್ ಆಟಗಾರ ಇಯಾನ್ ಸೆಲ್ಲಿ ಅವರ ಅನುಭವವನ್ನು ಬಳಸಿಕೊಳ್ಳಲು ಮುಂದೆ ಬರುವಂತೆ ಕರೆ ನೀಡಿದರು.
ಗೋಷ್ಠಿಯಲ್ಲಿ ಪುಟ್ಟಿಚಂಡ ದೇವಯ್ಯ ಉಪಸ್ಥಿತರಿದ್ದರು.